ಫೋನ್ ಕದ್ದಾಲಿಸಿದ್ದ ಒಬಾಮ: ಟ್ರಂಪ್ ಆರೋಪ
Update: 2017-03-05 00:16 IST
ವಾಶಿಂಗ್ಟನ್,ಮಾ.4: ತನ್ನ ಪೂರ್ವಾಧಿಕಾರಿ ಬರಾಕ್ ಒಬಾಮ ಅವರು 2016ರ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳ ಮೊದಲು ತನ್ನ ನ್ಯೂಯಾರ್ಕ್‌ಕಚೇರಿಯನ್ನು ಕದ್ದಾಲಿಕೆಗೊಳಪಡಿಸಿದ್ದರೆಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪಾದಿಸಿದ್ದಾರೆ. ತನ್ನ ಸಂವಹನ ವ್ಯವಸ್ಥೆಗಳ ಮೇಲೆ ನಡೆದಿದೆಯೆನ್ನಲಾದ ಈ ಕದ್ದಾಲಿಕೆಯನ್ನು ಅವು ‘‘ವಾಟರ್‌ಗೇಟ್ ಹಗರಣ’’ದೊಂದಿಗೆ ಹೋಲಿಸಿದ್ದಾರೆ. ಇಂದು ಟ್ರಂಪ್ ತನ್ನ ಸರಣಿ ಟ್ವೀಟ್‌ಗಳಲ್ಲಿ ಈ ಆರೋಪ ಮಾಡಿದ್ದಾರೆ. ‘‘ಘೋರ!. ಗೆಲುವಿಗೆ ಸ್ವಲ್ಪ ಮುನ್ನ ಟ್ರಂಪ್ ಟವರ್‌ನ್ನು ಒಬಾಮ ವೈರ್‌ಟ್ಯಾಪಿಂಗ್ (ಫೋನ್ ಕದ್ದಾಲಿಕೆ) ಮಾಡಿಸಿದ್ದರು. ಆದರೆ ಅಲ್ಲಿ ಏನೂ ಸಿಗಲಿಲ್ಲ. ಇದೊಂದು ದ್ರೋಹದ ಕೃತ್ಯವಾಗಿದೆ’’ ಎಂದು ಟ್ರಂಪ್ ಕಿಡಿಕಾರಿದ್ದಾರೆ.