×
Ad

1.36 ಕೋ.ರೂ.ಗಳ ಹಳೆಯ ನೋಟುಗಳು ವಶ, ಐವರ ಸೆರೆ

Update: 2017-03-05 15:20 IST

ಥಾಣೆ,ಮಾ.5: 1.36 ಕೋ.ರೂ.ಮೌಲ್ಯದ ಹಳೆಯ ನೋಟುಗಳನ್ನು ಇಲ್ಲಿ ವಶಪಡಿಸಿಕೊಂಡಿರುವ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮಾಹಿತಿಯ ಮೇರೆಗೆ ಉಪವನ ಸರೋವರ ಪ್ರದೇಶದಲ್ಲಿ ನಿಗಾ ಇರಿಸಿದ್ದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಡಿಸಿಪಿ ಸುನೀಲ ಲೋಖಂಡೆ ತಿಳಿಸಿದರು.

ಇದರೊಂದಿಗೆ ಪೊಲೀಸರು ಕಳೆದೊಂದು ವಾರದಲ್ಲಿ 3.52 ಕೋ.ರೂ.ಮೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು 12 ಜನರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಓರ್ವ ವೈದ್ಯನೂ ಸೇರಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News