ಎರಡನೆ ಟೆಸ್ಟ್: ಆಸ್ಟ್ರೇಲಿಯ ಮೇಲುಗೈ
Update: 2017-03-05 16:58 IST
ಬೆಂಗಳೂರು,ಮಾ.5: ಇಲ್ಲಿ ನಡೆಯುತ್ತಿರುವ ಎರಡನೆ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 48 ರನ್‌ಗಳ ಮೇಲುಗೈ ಸಾಧಿಸಿದೆ.
ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 106 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 237 ರನ್ ಗಳಿಸಿತ್ತು.
ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ 25 ರನ್ ಮತ್ತು ಮಿಷೆಲ್ ಸ್ಟಾರ್ಕ್ 25 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ
ಭಾರತದ ಪರ ರವೀಂದ್ರ ಜಡೇಜ 49ಕ್ಕೆ 3, ಇಶಾಂತ್ ಶರ್ಮ, ಉಮೇಶ್ ಯಾದವ್ ಮತ್ತು ಆರ್.ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.