×
Ad

ಹಣಕಾಸು ನಿರ್ಧಾರಗಳನ್ನು ಪ್ರಶ್ನಿಸಲು ಪಿಐಎಲ್ ಅಸ್ತ್ರವಲ್ಲ:ಆರ್‌ಬಿಐ

Update: 2017-03-05 20:27 IST

ಹೊಸದಿಲ್ಲಿ,ಮಾ.5: ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ ಸರ್ಚಾರ್ಜ್ ಹೇರಿಕೆಯನ್ನು ಪ್ರಶ್ನಿಸಿರುವ ಅರ್ಜಿಯನ್ನು ವಿರೋಧಿಸಿರುವ ಆರ್‌ಬಿಐ, ಹಣಕಾಸು ಅಥವಾ ಆರ್ಥಿಕ ನಿರ್ಧಾರಗಳನ್ನು ಪ್ರಶ್ನಿಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಅಸ್ತ್ರವನ್ನಾಗಿ ಬಳಸುವಂತಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ವಿಧಿಸುತ್ತಿರುವ ಸರ್ಚಾರ್ಜ್ ಅಕ್ರಮವಾಗಿದೆ ಮತ್ತು ತಾರತಮ್ಯದಿಂದ ಕೂಡಿದೆ ಎಂದು ವಕೀಲ ಅಮಿತ್ ಸಾಹ್ನಿ ಅವರು ಸಲ್ಲಿಸಿರುವ ಪಿಐಎಲ್‌ನಲ್ಲಿ ಆಪಾದಿಸಲಾಗಿದೆ.

ಆರ್‌ಬಿಐ ತನ್ನ ಆಡಳಿತಾತ್ಮಕ ಮತ್ತು ಶಾಸನಬದ್ಧ ಅಧಿಕಾರವನ್ನು ಬಳಸಿ ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ನಿರ್ಧಾರಗಳನು ತೆಗೆದುಕೊಂಡಿದೆ. ರಿಟ್ ಅರ್ಜಿಯಲ್ಲಿನ ವಿಷಯಗಳು ನೇರವಾಗಿ ಸರಕಾರದ ಆರ್ಥಿಕ ನೀತಿಗೆ ಸಂಬಂಧಿಸಿವೆ ಮತ್ತು ಇದನ್ನು ಪ್ರಶ್ನಿಸುವುದು ಪಿಐಎಲ್‌ನ ಮಾನದಂಡಗಳ ವ್ಯಾಪ್ತಿಯಲಿರುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಆಗಾಗ್ಗೆ ಸ್ಪಷ್ಟಪಡಿಸುತ್ತಲೇ ಇದೆ ಎಂದು ತಿಳಿಸಿರುವ ಬ್ಯಾಂಕ್ ,ಪಿಐಎಲ್ ಅನ್ನು ವಜಾ ಮಾಡುವಂತೆ ಮುಖ್ಯ ನ್ಯಾ.ಜಿ.ರೋಹಿಣಿ ಮತ್ತು ನ್ಯಾ.ಸಂಗೀತಾ ಧಿಂಗ್ರಾ ಅವರ ಪೀಠವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News