ಜಪಾನ್‌ನತ್ತ ನಾಲ್ಕು ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

Update: 2017-03-06 04:50 GMT

ಟೋಕಿಯೊ,ಮಾ.6: ಉತ್ತರ ಕೊರಿಯಾ ನಾಲ್ಕು ಸಿಡಿತಲೆ ಕ್ಷಿಪಣಿಗಳನ್ನು ಉಡಾಯಿಸಿದ್ದು, ಆ ಪೈಕಿ ಮೂರು ಜಪಾನ್‌ನ ವಿಶೇಷ ವಿತ್ತ ವಲಯದಲ್ಲಿ ಬಿದ್ದಿವೆ ಎಂದು ಜಪಾನ್ ಪ್ರಧಾನಿ ಶಿನೋರ್ ಅಬೆ ಪ್ರಕಟಿಸಿದ್ದಾರೆ.

ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಜಂಟಿ ಸೇನಾ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಉತ್ತರ ಕೊರಿಯಾ ಈ ದಾಳಿ ನಡೆಸಿದೆ. ಈ ಜಂಟಿ ಕಾರ್ಯಾಚರಣೆ ತಮ್ಮ ಮೇಲಿನ ದಾಳಿಗೆ ಪೂರ್ವಸಿದ್ಧತೆ ಎಂದರಿತ ಉತ್ತರ ಕೊರಿಯಾ ತನ್ನ ಸಾಮರ್ಥ್ಯ ಪ್ರದರ್ಶನಕ್ಕೆ ಮುಂದಾಗಿದೆ. ಉತ್ತರ ಕೊರಿಯಾದ ಹಲವು ಕ್ಷಿಪಣಿಗಳು ಸುಮಾರು 1000 ಕಿಲೋಮೀಟರ್ ಪ್ರದೇಶದ ಗುರಿಯನ್ನು ತಲುಪಿವೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಉತ್ತರ ಪ್ಯಾಂಗಾನ್ ಪ್ರಾಂತ್ಯದ ತೊಂಗ್‌ಚಾಂಗ್-ರಿ ಎಂಬಲ್ಲಿಂದ ಕ್ಷಿಪಣಿ ಸಿಡಿಸಲಾಗಿದ್ದು, ಇವು ಪೂರ್ವ ಸಮುದ್ರ ಎಂದು ಕರೆಯಲ್ಪಡುವ ಜಪಾನ್ ಸಮುದ್ರಕ್ಕೆ ತಲುಪಿವೆ ಎಂದು ದಕ್ಷಿಣ ಕೊರಿಯಾ ರಕ್ಷಣಾ ಸಚಿವಾಲಯದ ಅಧಿಕಾರಿಗಳು ವಿವರಿಸಿದ್ದಾರೆ.

ಉತ್ತರ ಕೊರಿಯಾದ ಸಮರ ಸಿದ್ಧತೆ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಹ್ವಾಂಗ್ ಕ್ಯೋ ಆನ್ ಅವರು ದೇಶದ ಭದ್ರತಾ ಮಂಡಳಿಯ ಸಭೆ ಕರೆದಿದ್ದಾರೆ. ಉತ್ತರ ಕೊರಿಯಾದ ಕ್ಷಿಪಣಿ ಉಡಾವಣೆ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿರುವಾಗಿ ಅಮೆರಿಕ ಸೇನಾ ಅಧಿಕಾರಿಗಳು ಹೇಳಿದ್ದಾರೆ.

ಇದಕ್ಕೂ ಮುನ್ನ ದಕ್ಷಿಣ ಕೊರಿಯಾ ಹಾಗೂ ಅಮೆರಿಕ ವಾರ್ಷಿಕ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದ್ದು, ಇದು ರಕ್ಷಣಾತ್ಮಕ ಸ್ವರೂಪದ್ದು ಎಂದು ಹೇಳಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News