​ಪನಾಮಾ ಸಿಟಿಯ ಸೇತುವೆಯಿಂದ ನದಿಗೆ ಉರುಳಿ ಬಿದ್ದ ಬಸ್‌ ; 18 ಸಾವು

Update: 2017-03-06 04:55 GMT

ಪನಾಮಾ ಸಿಟಿ, ಮಾ.6: ಕೃಷಿ ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ   ಪಾನ್-ಅಮೆರಿಕನ್ ಹೆದ್ದಾರಿಯ ಸೇತುವೆಯಲ್ಲಿ ಅಪಘಾತಕ್ಕಿಡಾಗಿ ನದಿಗೆ ಉರುಳಿ ಬಿದ್ದ  ಪರಿಣಾಮವಾಗಿ ಬಸ್‌ನಲ್ಲಿದ್ದ   18   ಪ್ರಯಾಣಿಕರು ಮೃತಪಟ್ಟು, 36 ಮಂದಿಗೆ ಗಾಯವಾದ ಘಟನೆ ರವಿವಾರ ಸಂಭವಿಸಿದೆ.
ಆಂಟನ್ ಬಳಿಯಿರುವ ಪಾನ್-ಅಮೆರಿಕನ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು , ವೇಗವಾಗಿ ಬರುತ್ತಿದ್ದ ಬಸ್  ಸೇತುವೆಯಿಂದ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಬಸ್ ನಲ್ಲಿ 50ಕ್ಕೂ ಅಧಿಕ ಪ್ರಯಾಣಿಕರು ಇದ್ದರೆಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News