×
Ad

ವಾರಾಣಸಿಯನ್ನು ಮೃತರ ನಗರ ಎಂದು ಕರೆದ ಪ್ರತಿಷ್ಠಿತ ನ್ಯೂಸ್ ಚಾನೆಲ್

Update: 2017-03-06 12:12 IST

ಹೊಸದಿಲ್ಲಿ, ಮಾ.6: ವಾರಣಾಸಿ ಭಾರತೀಯರ ಪಾಲಿಗೆ ಒಂದು ಪವಿತ್ರ ನಗರ. ಆದರೆ ದೇಶದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ಈ ನಗರದ ಬಗ್ಗೆ ಅಮೇರಿಕನ್ ಪ್ರತಿಷ್ಠಿತ ಸುದ್ದಿ ವಾಹನಿ ಸಿಎನ್‌ಎನ್ ಬಿಲೀವರ್ ಎಂಬ ಹೊಸ ಶೋ ಆರಂಭಿಸುವ ತಯಾರಿಯಲ್ಲಿತ್ತು. ಈ ಆರು ಭಾಗಗಳ ಸರಣಿ ಕಾರ್ಯಕ್ರಮವನ್ನು ಖ್ಯಾತ ಧಾರ್ಮಿಕ ವಿದ್ವಾಂಸ ರೆಝ ಅಸ್ಲನ್ ಆ್ಯಂಕರ್ ಆಗಿದ್ದಾರೆ.

ಈ ಹೊಸ ಶೋ ‘‘ಧಾರ್ಮಿಕ ಸಾಹಸ ಮಾಲಿಕೆಯಾಗಿದೆ. ವಿಶ್ವದ ಅತ್ಯಂತ ಆಸಕ್ತಿದಾಯಕ ಧರ್ಮಗಳ ಬಗ್ಗೆ ಒಬ್ಬ ಆಸ್ತಿಕನಾಗಿ ಅವರು ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಲಿದ್ದಾರೆ,’’ ಎಂದು ಸಿಎನ್‌ಎನ್ ವೆಬ್ ಸೈಟ್ ಹೇಳಿಕೊಂಡಿತ್ತು.

ಆದರೆ ಈ ಕಾರ್ಯಕ್ರಮದ ಟೀಸರ್ ಒಂದಕ್ಕೆ ಟ್ವಿಟ್ಟರಿನಲ್ಲಿ ನೀಡಿದ ತಲೆಬರಹ ಮಾತ್ರ ಸುದ್ದಿ ವಾಹಿನಿಯ ವಿರುದ್ಧ ಆಕ್ರೋಶದ ಅಲೆಯೇಳುವಂತೆ ಮಾಡಿತ್ತು. ‘‘ಇದನ್ನು ಮೃತರ ನಗರವೆಂದು ಹೇಳಲಾಗುತ್ತದೆ (ಸಿಟಿ ಆಫ್ ದಿ ಡೆಡ್) @ರೆಝಅಸ್ಲನ್ ನಿಮ್ಮನ್ನು ಅದರೊಳಗೆ ಸಿಎನ್‌ಎನ್ ಮಾಲಿಕೆ ಬಿಲೀವರ್ ನಲ್ಲಿ ಕರೆದುಕೊಂಡು ಹೋಗುತ್ತಾರೆ. ರವಿವಾರ ರಾತ್ರಿ 10 ಗಂಟೆಗೆ ಆರಂಭ @ಸಿಎನ್‌ಎನ್‌ಒರಿಜಿನಲ್ಸ್’’ ಎಂದು ಆ ಟ್ವೀಟ್ ಹೇಳಿತ್ತು.

ವಾರಣಾಸಿಯನ್ನು ಸಿಟಿ ಆಫ್ ದಿ ಡೆಡ್ ಎಂದು ವ್ಯಾಖ್ಯಾನಿಸಿದ್ದ ಟ್ವೀಟ್ ಕಾಣಿಸಿದ್ದೇ ತಡ ಭಾರತದಾದ್ಯಂತ ಹಲವಾರು ಮಂದಿ-ರಾಜಕಾರಣಿಗಳಿಂದ ಹಿಡಿದು ಇತಿಹಾಸಕಾರರ ತನಕ ಸಿಎನ್‌ಎನ್ ವಿರುದ್ಧ ಹರಿಹಾಯ್ದು ಚಾನೆಲ್ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News