ಬಾಂಗ್ಲಾದೇಶದಲ್ಲಿ ಬಾಲ್ಯವಿವಾಹದ ಹೊಸ ಕಾನೂನು ವಿರುದ್ಧ ಪ್ರತಿಭಟನೆ

Update: 2017-03-06 09:53 GMT

ಢಾಕ,ಮಾ.6: ಬಾಂಗ್ಲಾದೇಶದಲ್ಲಿ ಹೊಸ ಬಾಲ್ಯವಿವಾಹ ಕಾನೂನು ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಅಪ್ರಾಪ್ತ ವಯಸ್ಸಿನವರ ವಿವಾಹಕ್ಕೆ ವಿಶೇಷ ಅನುಮತಿಯನ್ನು ನೀಡುವ ಕಾನೂನು ಅಲ್ಲಿ ಕೆಲವು ಸಂಘಟನೆಗಳ ಶಂಕೆಗೆ ಕಾರಣವಾಗಿದೆ.

ಫೆಬ್ರವರಿ 27ರಂದು ಬಾಲ್ಯವಿವಾಹನಿಯಂತ್ರಣ ಮಸೂದೆ 2017ನ್ನು ಬಾಂಗ್ಲಾ ಪಾರ್ಲಿಮೆಂಟು ಪಾಸು ಮಾಡಿತ್ತು. 21ವರ್ಷ ಕೆಳಗಿನ ವಯೋಮಾನದ ಗಂಡು, 18ವರ್ಷ ವಯೋಮಾನದ ಹೆಣ್ಣು ಮಕ್ಕಳನ್ನುಅಪ್ರಾಪ್ತರು ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಆದರೆಕಾನೂನಾತ್ಮಕವಾಗಿ ಅಪ್ರಾಪ್ತರ ವಿವಾಹ ನಡೆದರೆ ಅದನ್ನು ಬಾಲ್ಯವಿವಾಹವೆಂದು ಹೇಳಿ ಶಿಕ್ಷೆ ನೀಡಲಾಗುವುದಾದರೂ ವಿಶೇಷ ಪರಿಸ್ಥಿತಿಯಲ್ಲಿ ಕೋರ್ಟಿನ ಅನುಮತಿ ಪಡೆದು ನಡೆಸುವ ಇಂತಹ ವಿವಾಹಗಳನ್ನು ಅಪರಾಧವಾಗಿ ಪರಿಗಣಿಸುವಂತಿಲ್ಲ ಎನ್ನುವ ವಿಶೇಷ ವ್ಯವಸ್ಥೆಯನ್ನು ಹೊಸ ಕಾನೂನಿನಲ್ಲಿ ಅನುಮತಿಸಲಾಗಿದೆ.

ಹೊಸ ಕಾನೂನನ್ನು ಮಹಿಳಾ ಸಂಘಟನೆಗಳು, ಮಾನವಹಕ್ಕು ಸಂಘಟನೆಗಳು ವಿರೋಧಿಸಿ ಪ್ರತಿಭಟನೆ ನಡೆಸುತ್ತಿವೆ. ಮದುವೆಯ ವಯಸ್ಸನ್ನು ಹೊಸ ಕಾನೂನಿನಲ್ಲಿ ನಿಗದಿಗೊಳಿಸಿಲ್ಲ. ಈ ಪರಿಸ್ಥಿತಿಯಲ್ಲಿ ದೇಶದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಮಾನವಹಕ್ಕು ಕಾರ್ಯಕರ್ತ ಸುಲ್ತಾನ್ ಕಮಾಲ್ ಆರೋಪಿಸಿದ್ದಾರೆ. ಏಶ್ಯದಲ್ಲಿ ಬಾಂಗ್ಲಾದೇಶದಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿವೆ.ದೇಶದಲ್ಲಿ ಶೇ.52ರಷ್ಟು ಮಕ್ಕಳು 18ವರ್ಷಆಗುವುದಕ್ಕಿಂತ ಮೊದಲೇ ಮದುವೆಯಾಗುತ್ತಿದ್ದಾರೆ.

ಶೇ.18ರಷ್ಟು ಹೆಣ್ಣುಮಕ್ಕಳು 15 ವರ್ಷಕ್ಕಿಂತ ಮೊದಲೇ ಮದುವೆಯಾಗುತ್ತಿದ್ದಾರೆ. ಆದ್ದರಿಂದ ಹೊಸಕಾನೂನಿನಲ್ಲಿ ಲೋಪವಿದೆ .ಇದು ಹೆಣ್ನುಮಕ್ಕಳ ಜೀವಕ್ಕೆ ಅಪಾಯಕಾರಿ ಎಂದು ಲಿಂಗ ತಜ್ಞ ಫವ್ಸಿಯಾ ಹೇಳಿದ್ದಾರೆ. ಆದರೆ ಇಂತಹ ಆತಂಕಗಳು ಆಧಾರರಹಿತವಾದುದು ಎಂದು ಬಾಂಗ್ಲಾ ಸರಕಾರ ಹೇಳಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News