ಕೇರಳದಲ್ಲಿ ಎಸೆಸೆಲ್ಸಿ, ಹೈಯರ್ ಸೆಕೆಂಡರಿ,ವಿ.ಎಚ್. ಎಸ್. ಇ ಪರೀಕ್ಷೆ ನಾಳೆಯಿಂದ

Update: 2017-03-07 05:44 GMT

ತಿರುವನಂತಪುರಂ,ಮಾ.7: ಈ ವರ್ಷದ ಎಸೆಸೆಲ್ಸಿ , ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ ಪರೀಕ್ಷೆಗಳು ಬುಧವಾರದಿಂದ ಆರಂಭವಾಗಲಿದೆ.4,55,906 ವಿದ್ಯಾರ್ಥಿಗಳು ಈ ಬಾರಿ ರೆಗ್ಯುಲರ್ ವಿಭಾಗದಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ.

2588 ವಿದ್ಯಾರ್ಥಿಗಳು ಖಾಸಗಿ ವಿಭಾಗದಲಿ ಪರೀಕ್ಷೆ ಬರೆಯಲಿದ್ದು, ಒಟ್ಟು 2933 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಲಕ್ಷದ್ವೀಪ, ಗಲ್ಫ್‌ನಲ್ಲಿ ಒಟ್ಟು ಒಂಬತ್ತು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರಗಲಿದೆ.

ಹೈಯರ್ ಸೆಕೆಂಡರಿ ವಿಭಾಗದಲ್ಲಿ ಪ್ರಥಮ ವರ್ಷದ 4, 61,230 ವಿದ್ಯಾರ್ಥಿಳು ಮತ್ತು ಎರಡನೆ ವರ್ಷದ 4,42,434 ವಿದ್ಯಾರ್ಥಿಗಳು 2050 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಈ ವಿಭಾಗದಲ್ಲಿ ಗಲ್ಫ್‌ನಲ್ಲಿ ಎಂಟು ಮತ್ತು ಮಾಹಿಯಲ್ಲಿ ಮೂರು, ಲಕ್ಷದ್ವೀಪದಲ್ಲಿ ಒಂಬತ್ತು ಪರೀಕ್ಷಾ ಕೇಂದ್ರಗಳಿವೆ. ವೊಕೇಶನಲ್ ಹೈಯರ್ ಸೆಕೆಂಡರಿ ವಿಭಾಗದಲ್ಲಿ 29,996 ಮಂದಿ ಪ್ರಥಮವರ್ಷ ಮತ್ತು 29,444 ದ್ವಿತೀಯ ವರ್ಷದ ಪರೀಕ್ಷೆ ಬರೆಯಲಿದ್ದಾರೆ.

ಎರಡನೆ ವರ್ಷದ ಪರೀಕ್ಷೆಯನ್ನು ಖಾಸಗಿಯಾಗಿ 1193 ಮಂದಿ ಬರೆಯಲಿದ್ದಾರೆ.ಮಾರ್ಚ್ ಎಂಟರಿಂದ 27 ರವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News