×
Ad

ಶಾಸಕ ಎ.ಎನ್.ಶಂಶೀರ್‌ಗೆ ಕೊಲೆ ಬೆದರಿಕೆ : 20 ಮಂದಿ ವಿರುದ್ಧ ಕೇಸುದಾಖಲು

Update: 2017-03-07 14:28 IST

ತಲಶ್ಶೇರಿ,ಮಾ.7: ಡಿವೈಎಫ್‌ಐ ರಾಜ್ಯಾಧ್ಯಕ್ಷ ಅಡ್ವೊಕೇಟ್ ಎ.ಎನ್. ಶಂಶೀರ್‌ಗೆ ಬೆದರಿಕೆ ಹಾಕಿ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ ಘಟನೆಯಲ್ಲಿ ಬಿಜೆಪಿ, ಆರೆಸ್ಸೆಸ್‌ನ ಕಾರ್ಯಕರ್ತರ ವಿರುದ್ಧ ನ್ಯೂ ಮಾಹಿ ಪೊಲೀಸರು ಕೇಸು ದಾಖಲಿಸಿದ್ದಾರೆಂದು ವರದಿಯಾಗಿದೆ.

ನೋಡಿದರೆ ಗುರುತು ಹಿಡಿಯಬಹುದಾದ ಮೂವರ ಸಹಿತ 20 ಮಂದಿ ವಿರುದ್ಧ ಕೇಸುದಾಖಲಿಸಲಾಗಿದೆ. ರವಿವಾರ ಸಂಜೆ ಶಾಸಕರ ಮಾಡಪ್ಪೀಡಿಗೆಯ ಮನೆಯ ಮುಂದೆ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರು ಘೋಷಣೆ ಕೂಗಿ ಕೊಲೆ ಬೆದರಿಕೆ ಹಾಕಿ ಪ್ರತಿಭಟನೆ ನಡೆಸಿದರೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News