×
Ad

ಶಂಕಿತ ಉಗ್ರನ ಹೊಡೆದುರುಳಿಸಿದ ಎಟಿಎಸ್

Update: 2017-03-07 22:00 IST

 ಲಕ್ನೋ, ಮಾ.7: ಉತ್ತರ ಪ್ರದೇಶದ ಠಾಕೂರ್‌ಗಂಜ್ ನಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರ ಸೈಪುಲ್ಲಾ ಎಂಬಾತನನ್ನು ಎಟಿಎಸ್ ಗುಂಡಿಟ್ಟು ಸಾಯಿಸಿದೆ.

   ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರ ಸೈಪುಲ್ಲಾ ಎಂಬಾತ ಶರಣಾಗಲು ಒಪ್ಪದೆ ಗುಂಡಿನ ಚಕಮಕಿಯಲ್ಲಿ ನಿರತನಾಗಿದ್ದ. ಅವನನ್ನು ಎಟಿಎಸ್ ಹೊಡೆದುರುಳಿಸಿದೆ. ಸೈಪುಲ್ಲಾ ಸುಮಾರು ಐದು ಗಂಟೆಗಳ ಕಾಲ ಗುಂಡಿನ ದಾಳಿ ನಡೆಸಿ ಆತ ಬೆದರಿಸುತ್ತಿದ್ದನು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News