×
Ad

ಅಮಿತ್ ಶಾ ವಾಹನದ ಮೇಲೆ ಮೊಟ್ಟೆಗಳನ್ನು ಎಸೆದ ಪಟೇಲ್ ಪ್ರತಿಭಟನಾಕಾರರು

Update: 2017-03-07 23:48 IST

ಅಹ್ಮದಾಬಾದ್,ಮಾ.7: ಮೀಸಲಾತಿಗಾಗಿ ಆಗ್ರಹಿಸುತ್ತಿರುವ ಪಟೇಲ್ ಸಮುದಾಯದವರೆನ್ನಲಾದ ಜನರ ಗುಂಪೊಂದು ಸೋಮವಾರ ರಾತ್ರಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಾಹನಗಳ ಸಾಲಿನ ಮೇಲೆ ಮೊಟ್ಟೆಗಳನ್ನು ಎಸೆದಿದೆ. ಮಂಗಳವಾರದಿಂದ ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಗುಜರಾತ್ ಭೇಟಿಯನ್ನು ಆರಂಭಿಸಿದ್ದು, ಬುಧವಾರ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ ಪೂರ್ವಸಿದ್ಧತೆಗಳನ್ನು ಪರಿಶೀಲಿಸಲೆಂದು ಶಾ ಅಲ್ಲಿಗೆ ತೆರಳುತ್ತಿದ್ದಾಗ ಮೊಟ್ಟೆಗಳ ತೂರಾಟ ನಡೆದಿದೆ.

ಪ್ರಭಾವಿ ಪಟೇಲ್ ಸಮುದಾಯದ ಕಾರ್ಯಕರ್ತರು ಬಿಜೆಪಿ ನಾಯಕರು ಮತ್ತು ಸಚಿವರ ಮೇಲೆ ಇಂತಹುದೇ ದಾಳಿಗಳನ್ನು ನಡೆಸಿದ ಬೆನ್ನಿಗೇ ಈ ಘಟನೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News