ಶಾಸಕರಿಗೆ ಬೆದರಿಕೆ: ಕೌನ್ಸಿಲರ್ ಸಹಿತ ಮೂವರು ಬಿಜೆಪಿ ಕಾರ್ಯಕರ್ತರ ಬಂಧನ
Update: 2017-03-08 11:20 IST
ತಲಶ್ಶೇರಿ,ಮಾ.8: ಡಿವೈಎಫ್‌ಐ ರಾಜ್ಯಾಧ್ಯಕ್ಷ, ಶಾಸಕ,ಅಡ್ವೊಕೇಟ್ ಎ. ಎನ್. ಶಂಸುದ್ದೀನ್‌ರ ಮನೆಮುಂದೆ ಕೊಲೆ ಬೆದರಿಕೆಯೊಡ್ಡಿ ಪ್ರತಿಭಟನೆ ನಡೆಸಿದ ಘಟನೆಯಲ್ಲಿ ನಗರಸಭಾ ಕೌನ್ಸಿಲರ್ ಸಹಿತ ಮೂವರು ಬಿಜೆಪಿ ಕಾರ್ಯಕರ್ತರನ್ನು ನ್ಯೂ ಮಾಹಿ ಪೊಲೀಸರು ಬಂಧಿಸಿದ್ದಾರೆ.
ನಗರಸಭೆಯ ಕೌನ್ಸಿಲರ್ ಲಿಜೇಷ್, ಕಾರ್ಯಕರ್ತರಾದ ನಜಿಲ್‌ದಾಸ್, ಜಿಜುರನ್ನು ಪೊಲೀಸರು ಬಂಧಿಸಿದ್ದು, ನಂತರ ಮೂವರಿಗೂ ಪೊಲೀಸರು ಜಾಮೀನು ನೀಡಿದ್ದಾರೆ.
ಸಂಘರ್ಷದ ಸ್ಥಿತಿ ನೆಲೆಸಿರುವುದರಿಂದ ಶಾಸಕರ ಮನೆಗೆ ಪೊಲೀಸ್ ಪಹರೆ ಬಲಪಡಿಸಲಾಗಿದೆ. ಅದೇವೇಳೆ ಬಿಜೆಪಿ, ಆರೆಸ್ಸೆಸ್ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಬೆದರಿಕೆಯೊಡ್ಡಿ ಪ್ರತಿಭಟನೆ ನಡೆಸಿದ ಇನ್ನೊಂದು ಘಟನೆಯಲ್ಲಿ 20 ಮಂದಿ ಸಿಪಿಎಂ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆಂದು ವರದಿಯಾಗಿದೆ.