×
Ad

ಗಂಭೀರ ಇರಿತಕ್ಕೊಳಗಾದ ಕೊರಳಿನೊಂದಿಗೆ 3 ಕಿ.ಮೀ. ನಡೆದ ಯುವಕ

Update: 2017-03-08 14:09 IST

ದಾಮ(ಮಧ್ಯಪ್ರದೇಶ), ಮಾ.8: ಅರ್ಧಕತ್ತರಿಸಲ್ಪಟ್ಟ ಕೊರಳಿನೊಂದಿಗೆ ನೆರವು ಯಾಚಿಸುತ್ತ ಯುವಕನೊಬ್ಬ ಮೂರು ಕಿಲೋಮೀಟರ್‌ವರೆಗೆ ನಡೆದು ಹೋಗಿದ್ದಾನೆ. ಮಧ್ಯಪ್ರದೇಶದ ದಾಮದಲ್ಲಿ ಘಟನೆ ನಡೆದಿದೆ. ದರೋಡೆಕೋರರು ಕ್ರೂರವಾಗಿ ದಾಳಿಮಾಡಿದ್ದ ರಂಜಿತ್ ಎನ್ನುವ ಯುವಕ ಸಹಾಯಕ್ಕಾಗಿ ಅಷ್ಟು ದೂರ ನಡೆದು ಹೋಗಿದ್ದಾನೆ.

27ವರ್ಷವಯಸ್ಸಿನರಂಜಿತ್ ಮತ್ತು ಅವನ ಗೆಳೆಯ ಗಾಲು ಲೋಧಿ ದಾಮದಲ್ಲಿ ಒಂದು ಮದುವೆಗೆ ಹೋಗಿ ಮರಳುತ್ತಿದ್ದರು. ದಾರಿಯಲ್ಲಿ ದರೋಡೆ ಕೋರರು ಇಬ್ಬರನ್ನು ಆಕ್ರಮಿಸಿ ತೀವ್ರ ಹಲ್ಲೆ ನಡೆಸಿ ಕೆಳಗೆ ದೂಡಿ ಹಾಕಿದ್ದರು. ಕೆಳಗೆ ಬಿದ್ದ ರಂಜಿತ್‌ನ ಕೊರಳನ್ನು ಚಾಕುವಿನಿಂದ ತಿವಿದು ಹಾಕಿಇವರ ಬಳಿಯಿಂದ 15,000ರೂಪಾಯಿ ಮತ್ತು ಮೊಬೈಲ್ ಫೋನ್‌ನ್ನು ಕಿತ್ತುಕೊಂಡು ಹೋಗಿದ್ದರು.

ರಂಜಿತ್‌ನ ಕೊರಳಿನಿಂದ ರಕ್ತಸ್ರಾವವಾಗುತ್ತಿತ್ತು. ಪ್ರಜ್ಞೆ ಕಳಕೊಂಡಿದ್ದ ಆತ ನಾಲ್ಕೂವರೆ ಗಂಟೆ ನಂತರ ಎಚ್ಚರಗೊಂಡು ನೋಡಿದಾಗ ಆತನ ಗೆಳೆಯ ಲೋಧಿ ಇರಲಿಲ್ಲ. ಸುತ್ತಲೂ ಯಾರೂ ಇರಲಿಲ್ಲ.ಆದ್ದರಿಂದ ಕತ್ತರಿಸಲ್ಪಟ್ಟ ಕೊರಳಿನೊಂದಿಗೆ ಆತ ಧೈರ್ಯವಹಿಸಿ ನಡೆದು ಕೊಂಡು ಹೋಗಿ ಸಹಾಯಕ್ಕಾಗಿ ಮೊರೆಇಟ್ಟಿದ್ದಾನೆ. ಮೂರು ಕಿಲೋಮೀಟರ್‌ನ ನಂತರ ಒಂದು ಗ್ರಾಮಕ್ಕೆ ತಲುಪಿದ್ದಾನೆ.

ರಂಜಿತ್‌ನ ಅವಸ್ಥೆಯನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.ಪೊಲೀಸರು ಬಂದು ರಂಜಿತ್‌ನನ್ನು ಆಸ್ಪತ್ರೆಗೆ ದಾಖಲಿಸಿದರು. ಇಷ್ಟು ಗಂಭೀರ ಇರಿತಕ್ಕೊಳಗಾದ ವ್ಯಕ್ತಿಯ ಜೀವ ಇಷ್ಟು ಕಾಲ ಉಳಿದದ್ದೇ ಆಶ್ಚರ್ಯಕರ ಎಂದು ವೈದ್ಯರು ಹೇಳಿದ್ದಾರೆ.ಜೀವ ಉಳಿಸಲು ಸಾಧ್ಯವೇ ಎಂದು ದೃಢವಾಗಿ ಏನನ್ನೂ ಹೇಳಲು ಈಗ ಸಾಧ್ಯವಿಲ್ಲ ಎಂದು ಡಾ. ಅಶ್ವಿನಿ ಪಟೇಲ್ ಹೇಳಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚುವ ಕೆಲಸ ಗಂಭೀರವಾಗಿ ನಡೆಸಲಾಗುತ್ತಿದೆ ಎಂದು ದಾಮ ಎಸ್ಪಿ ತಿಲಕ್ ಸಿಂಗ್ ಹೇಳಿದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News