ಮುಖದಲ್ಲಿನ ಸ್ನಾಯುಗಳು ವಿವಿಧ ಭಾವನೆಗಳನ್ನು ವ್ಯಕ್ತಪಡಿಸುತ್ತವೆ, ಆದರೆ ದೇಹದಲ್ಲಿಯ ಇತರ ಸ್ನಾಯುಗಳೇಕೆ ಹಾಗಿಲ್ಲ...?

Update: 2017-03-09 09:35 GMT

ಗಮನಿಸಿ ನೋಡಿ,ಕೇವಲ ಸ್ನಾಯುಗಳ ನೆರವಿನಿಂದ ನಾವು ಮುಖದಲ್ಲಿ ಅನೇಕ ಭಾವನೆಗಳನ್ನು ವ್ಯಕ್ತಪಡಿಸುತ್ತೇವೆ. ಆದರೆ ಈ ಪ್ರಕ್ರಿಯೆ ದೇಹದ ಇತರ ಭಾಗಗಳಲ್ಲಿ ಸಾಧ್ಯವಾಗದು. ಹೀಗೇಕೆಂದು ಎಂದಾದರೂ ಯೋಚಿಸಿದ್ದೀರಾ...?

ದೇಹದ ಹೆಚ್ಚಿನ ಭಾಗಗಳಲ್ಲಿ ಸ್ನಾಯುಗಳು ಗಡುಸಾದ,ಸ್ಥಿತಿ ಸ್ಥಾಪಕತ್ವ ಗುಣವಿಲ್ಲದ ನಾರಿನ ಸ್ವರೂಪದ ಆಳವಾದ ತಂತುಕೋಶಗಳ ಪದರ (ಡೀಪ್ ಫ್ಯಾಸಿಯಾ)ದ ಕೆಳಗಡೆ ಇರುತ್ತವೆ ಮತ್ತು ಮೂಳೆಗಳಿಗೆ ಅಂಟಿಕೊಂಡಿರುತ್ತವೆ.

ಈ ಭಾಗಗಳಲ್ಲಿ ಸ್ನಾಯುಗಳು ಚರ್ಮಕ್ಕೆ ಅಂಟಿಕೊಂಡಿರುವುದಿಲ್ಲವಾದ್ದರಿಂದ ಅವು ಚರ್ಮದಲ್ಲಿ ಯಾವುದೇ ಚಲನವಲನವನ್ನುಂಟು ಮಾಡಲು ಸಾಧ್ಯವಾಗುವುದಿಲ್ಲ.

ಆದರೆ ಮುಖದ ಭಾಗದಲ್ಲಿ ಡೀಪ್ ಫ್ಯಾಸಿಯಾ ಇರುವುದಿಲ್ಲ ಮತ್ತು ಸ್ನಾಯುಗಳು ಬಾಹ್ಯ ತಂತುಕೋಶ(ಸೂಪರ್‌ಫೀಶಿಯಲ್ ಫ್ಯಾಸಿಯಾ)ದಲ್ಲಿರುತ್ತವೆ ಮತ್ತು ಈ ಸೂಪರ್‌ಫೀಶಿಯಲ್ ಫ್ಯಾಸಿಯಾ ಚರ್ಮದ ಮೇಲ್ಮೈನ ಕೆಳಗೇ ಇರುತ್ತದೆ ಹಾಗೂ ಸ್ನಾಯುಗಳು ಚರ್ಮಕ್ಕೆ ಅಂಟಿಕೊಂಡಿರುತ್ತವೆ.

ಆದ್ದರಿಂದ ಮುಖದಲ್ಲಿಯ ಸ್ನಾಯುಗಳು ವಿವಿಧ ಮುಖಭಾವನೆಗಳನ್ನು ವ್ಯಕ್ತಪಡಿಸಲು ಕಾರಣವಾಗುವ ಚರ್ಮದ ಚಲನವಲನಗಳನ್ನುಂಟು ಮಾಡುತ್ತವೆ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News