ರಿಯಾದ್ : ಅಪಘಾತಕ್ಕೀಡಾಗಿ 15 ತಿಂಗಳಿಂದ ಆಸ್ಪತ್ರೆಯಲ್ಲೇ ಅನಾಥನಾದ ಭಾರತೀಯ ವ್ಯಕ್ತಿ
ರಿಯಾದ್, ಮಾ.9: ಕಾರುಢಿಕ್ಕಿಯಾಗಿ ಅರ್ಧಶರೀರದ ಚಲನೆಯನ್ನು ಕಳೆದು ಕೊಂಡಿರುವ ತ್ರಿಪುರದ ವ್ಯಕ್ತಿಯೊಬ್ಬರು ಕಳೆದ ಹದಿನೈದು ತಿಂಗಳಲ್ಲಿ ರಿಯಾದ್ ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿದ್ದಲ್ಲೇ ಇದ್ದಾರೆ. ತ್ರಿಪುರ ಶ್ರೀರಾಂಪುರದ ಫಾರೂಕ್ ಮಿಯ(26) ಎಕ್ಸಿಟ್ 15ರ ಸನದ್ ಆಸ್ಪತ್ರೆಯಲ್ಲಿ ಈ ಸ್ಥಿತಿಯಲ್ಲಿದ್ದಾರೆ. ಊರಿಗೆ ಕರೆದುಕೊಂಡು ಹೋಗು ವ ಎಲ್ಲ ಸಿದ್ಧತೆಗಳು ಆಗಿದೆ. ಆದರೆ ಅವರ ಜೊತೆ ಹೋಗಲು ಯಾರು ಇಲ್ಲದ ಅನಾಥ ಸ್ಥಿತಿ ಊರಿಗೆ ಹೋಗಲು ಅಡ್ಡಿಯಾಗಿದ್ದು, ಅವರು ಆಸ್ಪತ್ರೆಯಲ್ಲಿಯೇ ಉಳಿಯಬೇಕಾಗಿ ಬಂದಿದೆ. ಬಡ ಕುಟಂಬದವರಾದ ಅವರು 2015 ಮಾಚ್‌ನಲ್ಲಿ ಮನೆ ಚಾಲಕ ವೀಸಾದಲ್ಲಿ ತಾಯಿಫ್‌ಗೆ ಬಂದಿದ್ರು.
ತಾಯಿಫ್‌ನಲ್ಲಿ ಕಾರುಚಾಲಕರಾಗಿ ದುಡಿದು ನಾಲ್ಕುತಿಂಗಳನಂತರ ಅಲ್ಲಿಂದ ತಪ್ಪಿಸಿಕೊಂಡು ರಿಯಾದ್‌ಗೆ ಬಂದಿದ್ದರು. ಇಲ್ಲಿ ಹಲವು ರೀತಿಯ ಕೆಲಸಗಳು ಅವರು ಮಾಡಿಕೊಂಡಿದ್ದರು. 2015 ಡಿಸೆಂಬರ್ ಹದಿನೈದರಂದು ಫಾರೂಕ್ ಮಿಯ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಅತಿವೇಗದಿಂದ ಬಂದ ಕಾರು ಢಿಕ್ಕಿಹೊಡೆದು ಪರಾರಿಯಾಗಿತ್ತು. ರಸ್ತೆಬದಿ ಪ್ರಜ್ಞೆ ಕಳಕೊಂಡು ಬಿದ್ದಿದ್ದ ಅವರನ್ನು ರೆಡ್‌ಕ್ರೆಸೆಂಟ್ ಆಸ್ಪತ್ರೆಗೆ ದಾಖಲಿಸಿತ್ತು. ಎರಡು ತಿಂಗಳು ಕೋಮಾದಲ್ಲಿದ್ದು ನಂತರ ಪ್ರಜ್ಞೆ ಮರುಕಳಿಸಿದಾಗ ಎದೆಯಿಂದ ಕೆಳಗಿನ ಭಾಗ ಅಲ್ಲಾಡದ ಸ್ಥಿತಿ ನಿರ್ಮಾಣವಾಗಿತ್ತು. ಅವರಿಗೆ ಅಚೀಚೆ ಹಂದಾಡಲು ಕೂಡಾ ಸಾಧ್ಯವಾಗುವುದಿಲ್ಲ. ಎಲ್ಲ ಕಾನೂನು ತೊಡಕುಗಳನ್ನು ಸ್ವಯಂಸೇವಕರು ಸರಿಪಡಿಸಿ ಊರಿಗೆ ಹೋಗಲು ಅನುಮತಿ ದೊರಕಿಸಿಕೊಟ್ಟಿದ್ದಾರೆ. ಆದರೆ ಊರಿಗೆ ಹೋಗುವಸ್ಥಿತಿಯಲ್ಲಿ ಅವರಿಲ್ಲ. ಜೊತೆಯಲ್ಲಿ ಹೋಗಲು ಯಾರಾದರೂ ಸಿಕ್ಕಿದರೆ ಮಾತ್ರವೇ ಊರಿಗೆ ಹೋಗಲು ಸಾಧ್ಯವಿದೆ. ಎಕ್ಸಿಟ್ ವೀಸಾ ಸಿಕ್ಕಿದೆ. ಕೈಮಂಚದಲ್ಲಿ ಕೂರಿಸಿ ಊರಿಗೆ ಕರೆದುಕೊಂಡು ಹೋಗಲು ಅಗತ್ಯವಿರುವ ಎಲ್ಲ ಖರ್ಚುಗಳನ್ನು ಭಾರತದ ರಾಯಭಾರ ಕಚೇರಿ ವಹಿಸಿಕೊಳ್ಳಲು ಮುಂದೆ ಬಂದಿದೆ. ಆಸ್ಪತ್ರೆಯ ಅಧಿಕಾರಿಗಳು ಉತ್ತಮ ಚಿಕಿತ್ಸೆಯನ್ನು ನೀಡಿದ್ದಾರೆ. ಫಾರೂಕ್ ಅವಿವಾಹಿತರು ಎಂದು ವರದಿ ತಿಳಿಸಿದೆ.