ಕೇರಳದಲ್ಲಿ ಎಸ್‌ಎನ್‌ಡಿಪಿಗೆ ಪ್ರತಿ ಸಂಘಟನೆ ಅಸ್ತಿತ್ವಕ್ಕೆ
ಕೊಚ್ಚಿ, ಮಾ.9: ಎಂ.ಕೆ. ಸಾನು ಮಾಸ್ಟರ್‌ರನ್ನು ಮುಂದೆ ನಿಲ್ಲಿಸಿ ವೆಳ್ಳಾಪಳ್ಳಿ ನಟೇಶನ್ ವಿರೋಧಿಗಳನ್ನು ಒಗ್ಗೂಡಿಸಿ ಸಿಪಿಎಂ ಬೆಂಬಲದಲ್ಲಿ ಎಸ್‌ಎನ್‌ಡಿಪಿಯ ನಾಯಕತ್ವಕ್ಕೆ ವಿರುದ್ಧ ಬಂಡೆದ್ದವರ ಬದಲಿ ಸಂಘಟನೆ ಕಳೆದ ದಿವಸ ಅಸ್ತಿತ್ವಕ್ಕೆ ಬಂದಿದೆ. ಕಳೆದ ದಿವಸ ಈ ಉದ್ದೇಶದಲ್ಲಿ ಸೇರಿದ್ದ ಸಭೆಯಲ್ಲಿ ಗೋಕುಲಂ ಗೋಪಾಲನ್ ಅಧ್ಯಕ್ಷರು, ಎಸ್‌ಎನ್‌ಡಿಪಿಯ ಮಾಜಿ ಅಧ್ಯಕ್ಷ ಸಿ,ಕೆ. ವಿದ್ಯಾಸಾಗರ್ ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಗೋಪಿನಾಥನ್ ಕಾರ್ಯಕಾರಿ ಅಧ್ಯಕ್ಷರಾದ ಸಮಿತಿ ಆಯ್ಕೆ ಮಾಡಲಾಗಿದೆ. 'ಶ್ರೀ ನಾರಾಯಣ ಸಹೋದರ ಸಂಘಂ' ಎನ್ನುವ ಹೆಸರನ್ನು ಹೊಸ ಸಂಘಟನೆಗೆ ಇಡಲಾಗಿದೆ.
ಕೊಚ್ಚಿಯಲ್ಲಿ ಸೇರಿದ್ದ ಸಂಘಟನಾ ಸಮಾಲೋಚನಾ ಸಮ್ಮೇಳನದಲ್ಲಿ ಮುಖ್ಯ ಪೋಷಕರಾಗಿ ಫ್ರೊ, ಎಂ.ಕೆ. ಸಾನುಮಾಸ್ಟರ್‌ರನ್ನು ಆಯ್ಕೆ ಮಾಡಲಾಗಿದೆ. ಅಡ್ವೊಕೇಟ್ ಎನ್. ಡಿ. ಪ್ರೇಮಚಂದ್ರನ್ ಮುಖ್ಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಎಸ್‌ಎನ್‌ಡಿಪಿ ಬಿಜೆಪಿ ಕೂಟದೊಂದಿಗೆ ಸೇರಿದ ಹಿನ್ನೆಲೆಯಲ್ಲಿ ನಟೇಶನ್ ಮತ್ತು ಪುತ್ರ ತುಷಾರ್ ವೆಳ್ಳಾಪಳ್ಳಿಯ ಕ್ರಮವನ್ನು ವಿರೋಧಿಸಿ ಸಿಪಿಎಂ ಬೆಂಬಲದಲ್ಲಿ ಎಸ್‌ಎನ್‌ಡಿಪಿಗೆ ಪ್ರತಿಯಾಗಿ ಸಂಘಟನೆಯೊಂದು ಅಸ್ತಿತ್ವಕ್ಕೆ ಬಂದಿದೆ.
ಡಾ.ಯಶೋಧರನ್, ಪ್ರೊ. ಚಿತ್ರಾಂಗದನ್, ಕಿಳಿಮಾನೂರ್ ಚಂದ್ರಬಾಬು, ಡಾ. ಅಡೂರ್ ರಾಜನ್ ಹೊಸ ಸಂಘಟನೆಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಶಾಜಿ ವೆಟ್ಟೂರನ್, ಫ್ರೊ. ಮೋಹನ್‌ದಾಸ್ ಅಂಬಲತ್ತರ ಚಂದ್ರಬಾಬು, ಎ. ಅ.ಅಜಂತ್‌ಕುಮಾರ್, ಚೆರುನ್ನಿಯೂರ್ ಜಯಪ್ರಕಾಶ್, ಕಂಡಲೂರ್, ಸುಧೀರ್ ಸಂಚಾಲಕರಾಗಿದ್ದಾರೆ. ಸೌತ್ ಇಂಡಿಯನ್ ವಿನೋದ್ ಖಚಾಂಚಿ, ಟಿಪಿ ರಾಜನ್, ಸತ್ಯನ್ ಪಂದತ್ತಲ ಸಂಯೋಜಕರಾಗಿ ಆಯ್ಕೆಯಾದರು. ಗೋಕುಲಂ ಗೋಪಾಲ್, ವಿದ್ಯಾಸಾಗರ್ ಹೊಸಸಂಘಟನೆ ಸಮಾಲೋಚನಾ ಸಭೆಗೆ ನೇತೃತ್ವವನ್ನು ನೀಡಿದರು. ಶ್ರೀನಾರಾಯಣ ಗುರು ನೇತೃತ್ವ ನೀಡಿದ್ದ ಎಸ್‌ಎನ್ ಡಿಪಿ ಅದರ ಉದ್ದೇಶದಿಂದ ದಾರಿ ತಪ್ಪಿದೆ. ಆದ್ದರಿಂದ ಹೊಸ ಸಂಘಟನೆ ಸಂಘಟಿಸಲಾಗುತ್ತಿದೆ ಎಂದು ಸಾನು ಮಾಸ್ಟರ್ ಹೇಳಿದರು.
ಯಾರ ಹೆಸರನ್ನು ಹೇಳದೆ ಸಾನು ಮಾಸ್ಟರ್ ಟೀಕಿಸಿದರೆ, ಗೋಕುಲಂ ಗೋಪಾಲನ್, ಅಡ್ವೊಕೇಟ್ ಸಿ.ಕೆ. ವಿದ್ಯಾಸಾಗರ್, ಜಸ್ಟಿಸ್ ಸುಕುಮಾರನ್ ವೇಳ್ಳಾಪಳ್ಳಿ ನಟೇಶನ್, ಎಸ್‌ಎನ್‌ಡಿಪಿ ನಾಯಕರ ವಿರುದ್ಧ ಕಟು ಟೀಕೆ ಮಾಡಿದರು. ಈ ನಡುವೆ ಗೋಕುಲಂ ಗೋಪಾಲನ್ರ ಶ್ರೀನಾರಾಯಣ ಧರ್ಮವೇದಿಕೆಯಿಂದ ಕೆಲವರನ್ನು ಹೊಸ ಸಂಘಟನೆಯ ಪದಾಧಿಕಾರಿಗಳನ್ನಾಗಿ ಮಾಡುವುದನ್ನು ಸಮ್ಮೇಳನದಲ್ಲಿ ಕೆಲವರು ವಿರೋಧಿಸಿದ್ದಾರೆಂದು ವರದಿ ತಿಳಿಸಿದೆ.