×
Ad

ಹೊದಿಕೆಗೆ ಹಣ ಪಾವತಿಸಲು ನಿರಾಕರಿಸಿ ವಿಮಾನವನ್ನೇ 'ತಿರುಗಿಸಿದ' ಪ್ರಯಾಣಿಕ !

Update: 2017-03-09 16:22 IST

ಲಾಸ್ ವೇಗಸ್,ಮಾ.09 : ಪ್ರಯಾಣಿಕನೊಬ್ಬ ಹೊದಿಕೆಯೊಂದಕ್ಕೆ 12 ಡಾಲರ್ ಪಾವತಿಸಲು ನಿರಾಕರಿಸಿ ವಿಮಾನದಲ್ಲಿ ಕೆಟ್ಟದ್ದಾಗಿ ವರ್ತಿಸಿದ ಕಾರಣ ಲಾಸ್ ವೇಗಸ್ ನಿಂದ ಹೊನೊಲುಲುವಿಗೆ ಹಾರಾಟ ನಡೆಸುತ್ತಿದ್ದ ವಿಮಾನವೊಂದನ್ನು ಪೈಲಟ್ ಲಾಸ್ ಏಂಜಲಿಸ್ ನತ್ತ ತಿರುಗಿಸಬೇಕಾಗಿ ಬಂದ ಘಟನೆ ವರದಿಯಾಗಿದೆ.

ಹವಾಯಿಯನ್ ಏರ್ ಲೈನ್ಸ್ ಗೆ ಸೇರಿದ ವಿಮಾನ ಲಾಸ್ ವೇಗಸ್ ನಿಂದ ಪ್ರಯಾಣ ಆರಂಭಿಸುತ್ತಿದ್ದಂತೆಯೇ 66 ವರ್ಷದ ಪ್ರಯಾಣಿಕ ಚಳಿಯಿರುವುದರಿಂದ ಬ್ಲಾಂಕೆಟ್ ಒಂದನ್ನು ಕೇಳಿದ್ದ. ಅದಕ್ಕಾಗಿ 12 ಡಾಲರ್ ನೀಡಬೇಕೆಂದು ಹೇಳಿದಾಗ ಆ ವ್ಯಕ್ತಿ ತಾನು ಏರ್‌ಲೈನ್ಸ್ ಸಂಸ್ಥೆಯ ಕಾರ್ಪೊರೇಟ್ ಪ್ರತಿನಿಧಿಯಲ್ಲಿ ಮಾತನಾಡಬೇಕೆಂದು ಹೇಳಿದ್ದ. ಆಗ ಹಾರಾಟ ಸಂದರ್ಭದಲ್ಲೇ ಆತ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದಾಗ ‘‘ಇದಕ್ಕಾಗಿ ನಾನು ಕಟ್ಟಿಗೆಯ ಕೊಟ್ಟಿಗೆಯಿಂದ ಯಾರನ್ನಾದರೂ ತೆಗೆಯಲು ಬಯಸುತ್ತೇನೆ,’’ ಎಂದು ಹೇಳಿದಾಗ ಇದೊಂದು ಬೆದರಿಕೆಯೆಂದು ಪರಿಗಣಿಸಿದ ಪೈಲಟ್ ವಿಮಾನವನ್ನು ಲಾಸ್ ಏಂಜಲಿಸ್ ನತ್ತ ತಿರುಗಿಸಿದ್ದನು.

ವಿಮಾನ ಲಾಸ್ ಏಂಜಲಿಸ್ ತಲುಪುತ್ತಿದ್ದಂತೆಯೇ ಎಫ್ ಬಿ ಐ ಏಜಂಟರು ಪ್ರಯಾಣಿಕ ಮತ್ತು ವಿಮಾನದ ಸಿಬ್ಬಂದಿಯನ್ನು ಪ್ರಶ್ನಿಸಿ ಯಾರು ಕೂಡ ತಪ್ಪಿತಸ್ಥರಲ್ಲ ಎಂಬ ತೀರ್ಮಾನಕ್ಕೆ ಬಂದಿತ್ತು.

ಆ ಪ್ರಯಾಣಿಕ ನಂತರ ಬೇರೆ ವಿಮಾನದಲ್ಲಿ ತೆರಳಲು ನಿರ್ಧರಿಸಿದ್ದು, ಹವಾಯಿಯನ್ ಏರ್ ಲೈನ್ಸ್ ನ ವಿಮಾನ ಕೂಡ ಹೊನೊಲುಲುವಿನತ್ತ ತನ್ನ ನಿಗದಿತ ಪ್ರಯಾಣ ಬೆಳೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News