ಅಸೀಮಾನಂದ ಬಿಡುಗಡೆ ವಿರುದ್ಧ ಮೇಲ್ಮನವಿ:ಎನ್‌ಐಗೆ ಉವೈಸಿ ಆಗ್ರಹ

Update: 2017-03-09 13:18 GMT

ಹೊಸದಿಲ್ಲಿ,ಮಾ,9: 2007ರ ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಮತ್ತು ಇತರ ಆರು ಆರೋಪಿಗಳ ಖುಲಾಸೆಯ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಮೇಲ್ಮನವಿಯನ್ನು ಸಲ್ಲಿಸಬೇಕು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ ಉವೈಸಿ ಅವರು ಗುರುವಾರ ಇಲ್ಲಿ ಆಗ್ರಹಿಸಿದರು.

ಜೈಪುರದ ವಿಶೇಷ ಎನ್‌ಐಎ ನ್ಯಾಯಾಲಯವು ಬುಧವಾರ ಪ್ರಕರಣದಲ್ಲಿ ಸಂಶಯದ ಲಾಭ ನೀಡಿ ಅಸೀಮಾನಂದ ಮತ್ತು ಇತರ ಆರು ಜನರನ್ನು ಖುಲಾಸೆಗೊಳಿಸಿ, ಇತರ ಮೂವರನ್ನು ದೋಷಿಗಳೆಂದು ಘೋಷಿಸಿತ್ತು. ಈ ಪೈಕಿ ಸುನೀಲ ಜೋಷಿ ಎಂಬಾತ 2007ರಲ್ಲಿ ಕೊಲೆಯಾಗಿದ್ದಾನೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಸೀಮಾನಂದಗೆ ಶಿಕ್ಷೆಯಾಗು ವಂತಾಗಲು ಎನ್‌ಐಎ ಮೇಲ್ಮನವಿ ಸಲ್ಲಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಪ್ರಕರಣದಲ್ಲಿಯ ಎಲ್ಲ ದುಷ್ಕರ್ಮಿಗಳು ಶಿಕ್ಷ್ಷೆಗೊಳಗಾಗಬೇಕು ಎಂದು ಹೇಳಿದರು. ಆರೆಸ್ಸೆಸ್ ಕಾರ್ಯಕರ್ತರೂ ಸ್ಫೋಟ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಅವರು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News