×
Ad

ಕುವೈತ್‌ಗೆ 1,000 ಅಮೆರಿಕನ್ ಪಡೆಗಳ ನಿಯೋಜನೆ?

Update: 2017-03-09 20:15 IST

ವಾಶಿಂಗ್ಟನ್, ಮಾ. 9: ಐಸಿಸ್ ವಿರುದ್ಧದ ಹೋರಾಟದಲ್ಲಿ ಮೀಸಲು ಪಡೆಯಾಗಿ ಕಾರ್ಯನಿರ್ವಹಿಸಲು 1,000 ಅಮೆರಿಕನ್ ಸೈನಿಕರನ್ನು ಕುವೈತ್‌ಗೆ ಕಳುಹಿಸುವ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಚಿಸುತ್ತಿದ್ದಾರೆ.

ಸಿರಿಯ ಮತ್ತು ಇರಾಕ್‌ನಲ್ಲಿ ಅಮೆರಿಕ ಬೆಂಬಲಿತ ಸೈನಿಕರು ಐಸಿಸ್ ವಿರುದ್ಧದ ಆಕ್ರಮಣವನ್ನು ತೀವ್ರಗೊಳಿಸಿರುವಂತೆಯೇ ಈ ಬೆಳವಣಿಗೆ ಸಂಭವಿಸಿದೆ.

ಯುದ್ಧ ರಂಗದಲ್ಲಿ ತಲೆದೋರಬಹುದಾದ ಅನಿರೀಕ್ಷಿತ ಅವಕಾಶಗಳು ಮತ್ತು ಸವಾಲುಗಳಿಗೆ ತುರ್ತಾಗಿ ಸ್ಪಂದಿಸಲು ಯುದ್ಧ ಭೂಮಿಯಲ್ಲಿರುವ ಅಮೆರಿಕದ ಸೇನಾಧಿಕಾರಿಗಳಿಗೆ ಇದು ಅವಕಾಶವನ್ನು ಒದಗಿಸುತ್ತದೆ ಎಂದು ಈ ಯೋಜನೆಯ ಬೆಂಬಲಿಗರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News