ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಚಿನ್ನ ಅಡವಿಟ್ಟು ಪಡೆಯುವ ನಗದು ಸಾಲಕ್ಕೆಆರ್‌ಬಿಐ ನಿಂದ ಮಿತಿ

Update: 2017-03-09 16:15 GMT

ಮುಂಬೈ,ಮಾ,9: ಬ್ಯಾಂಕೇತರ ಹಣಕಾಸು ಸಂಸ್ಥೆ(ಎನ್‌ಬಿಎಫ್‌ಸಿ) ಗಳು ಚಿನ್ನವನ್ನು ಅಡವಿರಿಸಿಕೊಂಡು ನೀಡುವ ನಗದು ಸಾಲಕ್ಕೆ ಗುರುವಾರ ಅಂಕುಶ ಹಾಕಿರುವ ಆರ್‌ಬಿಐ ,ನಗದು ಸಾಲದ ಮೊತ್ತವನ್ನು 25,000 ರೂ.ಗೆ ಸೀಮಿತಗೊಳಿಸಿದೆ.

ಈವರೆಗೆ ಎನ್‌ಬಿಎಫ್‌ಸಿಗಳು ಒಂದು ಲಕ್ಷ ರೂ ಮತ್ತು ಅಧಿಕ ಮೊತ್ತದ ಚಿನ್ನದ ಮೇಲಿನ ಸಾಲಗಳನ್ನು ಚೆಕ್ ಮೂಲಕವೇ ವಿತರಿಸಬೇಕೆಂಬ ನಿಯಮವಿತ್ತು.

ಆದಾಯ ತೆರಿಗೆ ಕಾಯ್ದೆ,1961ಕ್ಕೆ ಅನುಗುಣವಾಗಿ ಆರ್‌ಬಿಐ ನಗದು ಪಡೆಯಬಹುದಾದ ಸಾಲವನ್ನು ಒಂದು ಲಕ್ಷ ರೂ.ಗಳಿಂದ 25,000 ರೂ.ಗೆ ತಗ್ಗಿಸಿದೆ.

ಸರಕಾರವು ನಗದುರಹಿತ ಆರ್ಥಿಕತೆಯನ್ನು ತಗ್ಗಿಸಲು ಮತ್ತು ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ಆದ್ಯತೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಆರ್‌ಬಿಐನ ಈ ಕ್ರಮ ಮಹತ್ವ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News