ಜಯಪ್ರಕಾಶ್ ಹೆಗ್ಡೆಯಿಂದ ಜಾತ್ಯತೀತ ತತ್ವಕ್ಕೆ ತಿಲಾಂಜಲಿ: ಸಿಪಿಎಂ

Update: 2017-03-09 18:48 GMT

ಉಡುಪಿ, ಮಾ.9: ಬಿಜೆಪಿಗೆ ಅಕೃತವಾಗಿ ಸೇರ್ಪಡೆಗೊ ಳ್ಳುವ ಮೂಲಕ ಮಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ ಇದುವರೆಗೆ ಅವರು ನಂಬಿಕೊಂಡು ಬಂದಿದ್ದ ಜಾತ್ಯತೀತ ತತ್ವಕ್ಕೆ ತಿಲಾಂಜಲಿ ಹಾಡಿದ್ದಾರೆ ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ. 

ಹೆಗ್ಡೆ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅತೀವ ಕಾಳಜಿ ಹೊಂದಿದ್ದು, ಎಲ್ಲಾ ಧರ್ಮದವರನ್ನು ಸಮಾ ನವಾಗಿ ಕಾಣುವ ಮನೋಭಾವ ಉಳ್ಳವರಾಗಿದ್ದರು. ಸುಮಾರು 30 ವರ್ಷಗಳ ರಾಜಕೀಯ ಜೀವನದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಧೋರಣೆಗಳನ್ನು ಸತತವಾಗಿ ವಿರೋಸಿಕೊಂಡು ಬಂದಿದ್ದರು. ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದವರು ದ.ಕ. ಜಿಲ್ಲಾ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ‘ಬಂದ್ ಕರೆ ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ಬಣ್ಣಿಸಿದ್ದರು. ಗೋ ಸಾಗಾಟದ ಹೆಸರಿನಲ್ಲಿ ಆದಿಉಡುಪಿಯಲ್ಲಿ ಹಾಜಬ್ಬ, ಹಸನಬ್ಬರ ಬೆತ್ತಲೆ ಪ್ರಕರಣವನ್ನು ಜಯಪ್ರಕಾಶ್ ಹೆಗ್ಡೆ ಮತ್ತು ಸಿಪಿಎಂ ಶಾಸಕರಾಗಿದ್ದ ಶ್ರೀರಾಮ ರೆಡ್ಡಿ ವಿಧಾನ ಸಭೆಯಲ್ಲಿ ತೀವ್ರವಾಗಿ ಖಂಡಿಸಿದ್ದರು.

ಇಂತಹ ವ್ಯಕ್ತಿತ್ವ ಉಳ್ಳವರು ಬಿಜೆಪಿಯ ಕೋಮು ಖೆಡ್ಡಾಕ್ಕೆ ಬಿದ್ದಿರುವುದು ವಿಪರ್ಯಾಸ. ಉಡುಪಿ ಜಿಲ್ಲೆಯ ಜನತೆ ಅವಕಾಶವಾದಿ ರಾಜಕಾರಣವನ್ನು ಎಂದೂ ಬೆಂಬಲಿಸುವುದಿಲ್ಲ ಎಂದು ಸಿಪಿಎಂ ಭರವಸೆ ಹೊಂದಿದೆ ಎಂದು ಜಿಲ್ಲಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News