ಆತ್ಮಹತ್ಯೆಗೈದ ಸೈನಿಕನ ಕುಟುಂಬಕ್ಕೆ ಒಂದು ಕೋಟಿ ರೂ.ನೀಡುವ ಸರಕಾರದ ನಿರ್ಧಾರವನ್ನು ತಿರಸ್ಕರಿಸಿದ ದಿಲ್ಲಿ ಗವರ್ನರ್

Update: 2017-03-10 05:17 GMT

ಹೊಸದಿಲ್ಲಿ, ಮಾ.10: ದಿಲ್ಲಿಯಲ್ಲಿ ಆತ್ಮಹತ್ಯೆಗೈದ ಸೈನಿಕನ ಕುಟುಂಬಕ್ಕೆ ಒಂದು ಕೋಟಿ ರೂ.ನೀಡುವ ದಿಲ್ಲಿ ಸರಕಾರದ ನಿರ್ಧಾರವನ್ನು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್‌ ತಿರಸ್ಕರಿಸಿದ್ದಾರೆ.
ಮಾಜಿ ಸೈನಿಕ ರಾಮ್ ಕಿಶನ್ ಗ್ರೇವಾಲ್‌ ಒ ಆರ್ ಒ ಪಿ  ಜಾರಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. 
ಸೈನಿಕ ರಾಮ್ ಕಿಶನ್ ಗ್ರೇವಾಲ್‌ ಅವರಿಗೆ ದಿಲ್ಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ನೇತೃತ್ವದ ಸಚಿವ ಸಂಪುಟ 1 ಕೋಟಿ ರೂ. ನೀಡುವ ಬಗ್ಗೆ ನಿರ್ಧಾರ ಕೈಗೊಂಡು, ಅಂಕಿತಕ್ಕಾಗಿ ದಿಲ್ಲಿ ಲೆಫ್ಟಿನೆಂಟ್ ಗವರ್ನರ‍್ ಅನಿಲ್ ಬೈಜಾಲ್‌ ಅವರಿಗೆ ಸಲ್ಲಿಸಿತ್ತು
ಸೈನಿಕ ಗಡಿಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಮೃತಪಟ್ಟಿಲ್ಲ. ಈ ಕಾರಣದಿಂದಾಗಿ ಅವರ ಕುಟುಂಬಕ್ಕೆ ಒಂದು ಕೋಟಿ ರೂ.ಪರಿಹಾರ ನೀಡಲು ಸಾಧ್ಯವಿಲ್ಲ ಎಂದುಲೆಫ್ಟಿನೆಂಟ್ ಗವರ್ನರ‍್ ಅನಿಲ್ ಬೈಜಾಲ್‌ ಸ್ಪಷ್ಟಪಡಿಸಿದ್ದಾರೆ.

ಎಲ್ಜಿ ಅವರು ಕಳೆದ ಎರಡು ತಿಂಗಳಿನಿಂದ ಬಾಕಿ ಉಳಿದಿದ್ದ ರಾಜ್ಯ ಸರಕಾರದ ಹಲವು ಕಡತಗಳಿಗೆ ಸಹಿ ಹಾಕಿದ್ದರು. ಆದರೆ ಸೈನಿಕನ ಕುಟುಂಬಕ್ಕೆ ಪರಿಹಾರ ನೀಡುವ ಸಂಪುಟದ ನಿರ್ಧಾರವನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್‌ ಕೋಪಗೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರದ ವಿರುದ್ಧ ಆಕ್ರೋಶ ವ್ಯಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News