×
Ad

ಕೇರಳ ನೈತಿಕ ಗೂಂಡಾಗಿರಿ: ಬಂಧಿಸಲಾದ ಆರೋಪಿಗಳಲ್ಲೊಬ್ಬ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ!

Update: 2017-03-10 12:36 IST

 ಕೊಚ್ಚಿ,ಮಾ.10: ಇಲ್ಲಿನ ಮರೈನ್ ಡ್ರೈವ್‌ನಲ್ಲಿ ಯುವತಿಮತ್ತು ಯುವಕರನ್ನು ಹಲ್ಲೆ ಎಸಗಿ ಬೆನ್ನಟ್ಟಿದ ಪ್ರಕರಣದಲ್ಲಿ ಬಂಧಿಸಲಾದ ಆರೋಪಿಗಳಲ್ಲಿ ಟಿ.ಕೆ. ಅರವಿಂದನ್ ಎನ್ನುವಾತ ಮೂಗಿ ಮತ್ತು ಕಿವುಡಿ ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದ ಆರೋಪಿಯೆಂದು ತಿಳಿದು ಬಂದಿದೆ.

ಎರ್ನಾಕುಲಂ ಞಾರಕ್ಕಲ್ ಪೊಲೀಸ್ ಠಾಣೆಯಲ್ಲಿ 2014ರಲ್ಲಿ ಅರವಿಂದನ್ ವಿರುದ್ಧ ಯುವತಿ ದೂರು ನೀಡಿದ್ದರು. ಸರಕಾರಿ ಶಾಲೆಯ ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷನಾಗಿದ್ದ ವೇಳೆ ಶಾಲೆಯ ನೌಕರೆಯ ಅತ್ಯಾಚಾರಕ್ಕೆ ಆತ ವಿಫಲ ಪ್ರಯತ್ನ ನಡೆಸಿದ್ದಾನೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News