×
Ad

ಒತ್ತಡಕ್ಕೆ ಸಿಲುಕಿ ನಿಜವಾದ ಚುನಾವಣೋತ್ತರ ಸಮೀಕ್ಷೆಯನ್ನು ಬದಲಾಯಿಸಿದ ಟಿವಿ ಚಾನಲ್ ಗಳು : ಎಸ್ಪಿ ಆರೋಪ

Update: 2017-03-10 12:42 IST

ಹೊಸದಿಲ್ಲಿ, ಮಾ.10: ಮೂಲ ಮತಗಟ್ಟೆ ಸಮೀಕ್ಷೆಯಲ್ಲಿ ಟಿವಿ ಚಾನಲ್‌ಗಳಿಗೆ ಒತ್ತಡ ಹೇರಲಾಗಿದ್ದು, ಇದರಿಂದಾಗಿ ಮತಗಟ್ಟೆ ಸಮೀಕ್ಷೆಗಳು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿರುವುದಾಗಿ ಪ್ರಕಟಿಸಿದೆ ಎಂದು ಸಮಾಜವಾದಿ ಪಕ್ಷ ಅಭಿಪ್ರಾಯಪಟ್ಟಿದೆ.
ಎಎನ್ ಐ ಸುದ್ದಿಯೊಂದಿಗೆ ಮಾತನಾಡಿದ ಎಸ್ಪಿ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್‌ ಯಾದವ್‌ ಅವರು ಬಿಜೆಪಿಗೆ ಉತ್ತರಪ್ರದೇಶದಲ್ಲಿ ಅನುಕೂಲಕರ ವಾತಾವರಣ ಇರುವುದನ್ನು ತಿರಸ್ಕರಿಸಿದರು. ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ ಉತ್ತರ ಪ್ರದೇಶದಲ್ಲಿ ಬಹುಮತ ಗಳಿಸಲಿದೆ ಎಂದು ಅವರು ಹೇಳಿದರು.
ಎಸ್ಪಿ -ಕಾಂಗ್ರೆಸ್ ಮೈತ್ರಿಯಿಂದಾಗಿ ಬಿಜೆಪಿಗೆ ಲಾಭವಾಗಿದೆ ಎಂದು ಎರಡು  ಸಮೀಕ್ಷೆಗಳಲ್ಲಿ ಹೇಳಲಾಗಿದ್ದು, ಬಹುಜನ ಸಮಾಜ ಪಕ್ಷ ಮೂರನೆ ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇದರ ಬೆನ್ನಲ್ಲೆ ರಾಮ್ ಗೋಪಾಲ್‌ ಹೇಳಿಕೆ ನೀಡಿದ್ದಾರೆ.
ಮಾ.11ರಂದು ಉತ್ತರ ಪ್ರದೇಶದ ವಿಧಾನಸಭೆಯ 403 ಸ್ಥಾನಗಳಿಗೆ ನಡೆದ  ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ. ಇದರಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದೆ. ಆದರೆ ಕೆಲವೊಮ್ಮೆ ಮತಗಟ್ಟೆ ಸಮೀಕ್ಷೆಗಳು ತಪ್ಪಾಗುತ್ತದೆ. 2015ರ  ದಿಲ್ಲಿ ಮತ್ತು ಬಿಹಾರ ಚುನಾವಣಾ ಸಮೀಕ್ಷೆ ಸುಳ್ಳಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News