ಹಂಗೇರಿಯಲ್ಲಿ ಎಟಿಸಿ ಸಂಪರ್ಕ ಕಳೆದುಕೊಂಡ ಏರ್‌ಇಂಡಿಯಾ ವಿಮಾನ !

Update: 2017-03-10 14:46 GMT

ಲಂಡನ್, ಮಾ. 10: ಶುಕ್ರವಾರ ಮುಂಬೈನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಹಂಗೇರಿ ಆಕಾಶದಲ್ಲಿ ಹಾರುತ್ತಿದ್ದಾಗ ವಾಯು ಸಾರಿಗೆ ನಿಯಂತ್ರಣ ಕೇಂದ್ರ (ಎಟಿಸಿ)ದೊಂದಿಗೆ ಸಂಪರ್ಕ ಕಡಿದುಕೊಂಡು ತೊಂದರೆಗೆ ಸಿಲುಕಿದ ಘಟನೆ ವರದಿಯಾಗಿದೆ.

ಬಳಿಕ ವಿಮಾನವನ್ನು ಯುದ್ಧವಿಮಾನಗಳು ಮುನ್ನಡೆಸಿಕೊಂಡು ಹೋಗಬೇಕಾಯಿತು.

231 ಪ್ರಯಾಣಿಕರು ಮತ್ತು 18 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ‘ಫ್ರೀಕ್ವೆನ್ಸಿ ಏರಿಳಿತ’ದಿಂದಾಗಿ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಡಿದುಕೊಂಡಿತು ಎಂದು ಏರ್ ಇಂಡಿಯಾ ವಕ್ತಾರೆಯೊಬ್ಬರು ತಿಳಿಸಿದರು.

ಬೆಳಗ್ಗೆ 7 ಗಂಟೆಗೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ವಿಮಾನ ಬೆಳಗ್ಗೆ 11:05ಕ್ಕೆ ಲಂಡನ್‌ನ ಹೀತ್ರೂ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ವಕ್ತಾರೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News