×
Ad

ಅಮೆರಿಕ : ಕಮ್ಯುನಿಕೇಶನ್ಸ್ ಕಮಿಶನ್ ಮುಖ್ಯಸ್ಥರಾಗಿ ಭಾರತೀಯ ಅಮೆರಿಕನ್ ಅಜಿತ್ ಪೈ

Update: 2017-03-10 21:49 IST

ವಾಶಿಂಗ್ಟನ್, ಮಾ. 10: ಭಾರತೀಯ ಅಮೆರಿಕನ್ ಅಜಿತ್ ಪೈ ಅವರನ್ನು ಫೆಡರಲ್ ಕಮ್ಯುನಿಕೇಶನ್ಸ್ ಕಮಿಶನ್ (ಎಫ್‌ಸಿಸಿ)ನಲ್ಲಿ ಇನ್ನೊಂದು ಅವಧಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ.

ಎಫ್‌ಸಿಸಿಯ ಅಧ್ಯಕ್ಷರಾಗಿ ಪೈ ಅವರನ್ನು ಟ್ರಂಪ್ ಜನವರಿಯಲ್ಲಿ ನೇಮಿಸಿದ್ದಾರೆ. ಈ ಹಿಂದೆ ಅವರನ್ನು ಎಫ್‌ಸಿಸಿಯ ಕಮಿಶನರ್ ಆಗಿ ಅಂದಿನ ಅಧ್ಯಕ್ಷ ಬರಾಕ್ ಒಬಾಮ 2012 ಮೇ ತಿಂಗಳಲ್ಲಿ ನೇಮಿಸಿದ್ದರು.

‘‘ಈ ಸಮರ್ಪಣಾ ಮನೋಭಾವದ ಪುರುಷರು ಮತ್ತು ಮಹಿಳೆಯರು ನನಗೆ ಮತ್ತು ನನ್ನ ಆಡಳಿತಕ್ಕೆ ಅಮೆರಿಕವನ್ನು ಮತ್ತೊಮ್ಮೆ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಸಹಾಯ ಮಾಡುತ್ತಾರೆ. ಸೇವೆ ಸಲ್ಲಿಸುವ ಅವರ ಉತ್ಸುಕತೆಗೆ ನಾನು ಕೃತಜ್ಞನಾಗಿದ್ದೇನೆ ಹಾಗೂ ಅವರು ನನ್ನ ತಂಡಕ್ಕೆ ಸೇರ್ಪಡೆಗೊಂಡಿರುವುದು ನನಗೆ ಗೌರವದ ವಿಷಯವಾಗಿದೆ’’ ಎಂದು ಹಲವು ನೇಮಕಾತಿಗಳನ್ನು ಘೋಷಿಸಿದ ವೇಳೆ ಟ್ರಂಪ್ ಹೇಳಿದರು.

ಪೈ ಭಾರತೀಯ ವಲಸಿಗರ ಪುತ್ರರಾಗಿದ್ದಾರೆ ಹಾಗೂ ಕ್ಯಾನ್ಸಸ್‌ನ ಪಾರ್ಸನ್ಸ್‌ನಲ್ಲಿ ಬೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News