ಅಮೆರಿಕ : ಆರೋಗ್ಯ ಯೋಜನೆಗಳ ಮುಖ್ಯಸ್ಥೆಯಾಗಿ ಭಾರತೀಯ ಅಮೆರಿಕನ್ ನೇಮಕ
Update: 2017-03-10 21:57 IST
ವಾಶಿಂಗ್ಟನ್, ಮಾ. 10: ಅಮೆರಿಕದ ಎರಡು ಬೃಹತ್ ಸಾರ್ವಜನಿಕ ಆರೋಗ್ಯ ವಿಮೆ ಕಾರ್ಯಕ್ರಮಗಳ ಮುಖ್ಯಸ್ಥೆಯಾಗಿ ಭಾರತೀಯ ಅಮೆರಿಕನ್ ಸೀಮಾ ವರ್ಮಾರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಯ್ಕೆ ಮಾಡಿದ್ದಾರೆ.
ಅಮೆರಿಕದ ಸೆನೆಟ್‌ನಲ್ಲಿ ನಡೆದ ಮತದಾನದಲ್ಲಿ ಅವರ ನೇಮಕಾತಿಯು 54-44 ಮತಗಳ ಅಂತರದಿಂದ ಅಂಗೀಕಾರಗೊಂಡಿದೆ. ಅಂತಿಮ ಖಾತರಿ ಮತದಾನವು ಮಾರ್ಚ್ 13ರಂದು ಸಂಜೆ ನಡೆಯಲಿದೆ.
ಅವರ ಆಯ್ಕೆ ವಿಚಾರದಲ್ಲಿ ಸೆನೆಟ್ ಪಕ್ಷದ ಆಧಾರದಲ್ಲಿ ವಿಭಜನೆಗೊಂಡಿತ್ತು.
ಎಸ್‌ವಿಸಿ ಇಂಕ್‌ನ ಅಧ್ಯಕ್ಷೆ, ಸಿಇಒ ಮತ್ತು ಸ್ಥಾಪಕರಾಗಿರುವ ಸೀಮಾ, ಆರೋಗ್ಯರಕ್ಷಣೆ ನೀತಿ ಕ್ಷೇತ್ರದಲ್ಲಿ 20 ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಕೆಲಸ ಮಾಡುತ್ತಿದ್ದಾರೆ.
ಅವರು ಮೆಡಿಕೇರ್ ಸೆಂಟರ್ ಮತ್ತು ಮೆಡಿಕೇಡ್ ಸರ್ವಿಸಸ್ ಸೆಂಟರ್‌ಗಳ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ.