ಪ್ರಧಾನಿ ಫೋಟೋ ಬಳಕೆ: ಕ್ಷಮೆ ಕೋರಿದ ಜಿಯೊ, ಪೇಟಿಎಂ

Update: 2017-03-10 17:56 GMT

ಹೊಸದಿಲ್ಲಿ, ಮಾ.10: ತಮ್ಮ ಜಾಹೀರಾತಿನಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ‘ಉದ್ದೇಶಪೂರ್ವಕವಲ್ಲದೆ ’ ಬಳಸಿದ ಕಾರಣಕ್ಕೆ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೊ ಮತ್ತು ಡಿಜಿಟಲ್ ವ್ಯಾಲೆಟ್ ಪೇಟಿಎಂ ಸಂಸ್ಥೆ ಕ್ಷಮೆ ಕೋರಿದೆ.

ಪ್ರಧಾನಿ ಮೋದಿ ಭಾವಚಿತ್ರ ಬಳಸಿ ಕಾನೂನನ್ನು ಉಲ್ಲಂಘಿಸಿದ ಕಾರಣಕ್ಕೆ ಗ್ರಾಹಕರ ವ್ಯವಹಾರ ಇಲಾಖೆ ಈ ಎರಡು ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ಎರಡೂ ಸಂಸ್ಥೆಗಳು ತಮ್ಮ ‘ಅನುದ್ದಿಷ್ಟ’ ಕಾರ್ಯಕ್ಕಾಗಿ ಕ್ಷಮೆ ಯಾಚಿಸಿವೆ ಎಂದು ಗ್ರಾಹಕರ ವ್ಯವಹಾರ ಇಲಾಖೆ ಸಹಾಯಕ ಸಚಿವ ಸಿ.ಆರ್.ಚೌಧರಿ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಈ ಎರಡೂ ಸಂಸ್ಥೆಗಳು ಕಾನೂನನ್ನು ಉಲ್ಲಂಘಿಸಿ ಪ್ರಧಾನಿಯವರ ಭಾವಚಿತ್ರ ಇರುವ ಜಾಹೀರಾತನ್ನು ಪ್ರಕಟಿಸಿದ್ದವು ಎಂದು ಸಚಿವರು ತಿಳಿಸಿದರು. ಖಾಸಗಿ ಸಂಸ್ಥೆಗಳು ಪ್ರಧಾನಿ ಭಾವಚಿತ್ರ ಬಳಸಲು ಅನುಮತಿ ನೀಡುವ ಯೋಜನೆಯಿದೆಯೇ ಅಥವಾ ಸರಕಾರ ಈ ಬಗ್ಗೆ ಹೊಸ ನಿಯಮ ಅಳವಡಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ರೀತಿಯ ಸಲಹೆಯನ್ನು ಸಮಿತಿಯೊಂದು ಪರಿಶೀಲಿಸಲಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News