×
Ad

ಉತ್ತರ ಪ್ರದೇಶದಲ್ಲಿ 26 ವರ್ಷಗಳ ಬಳಿಕ ಬಿಜೆಪಿಗೆ ಸ್ಪಷ್ಟ ಬಹುಮತ

Update: 2017-03-11 13:06 IST

ಲಕ್ನೋ, ಮಾ.11: ಉತ್ತರ ಪ್ರದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮ್ಯಾಜಿಕ್ ಫಲ ನೀಡಿದೆ. ಇಪ್ಪತ್ತಾರು ವರ್ಷಗಳ ಬಳಿಕ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.
ಆಡಳಿತಾರೂಢ ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದೆ. ಕಾಂಗ್ರೆನೊಂದಿಗೆ ಮೈತ್ರಿ ಮಾಡಿಕೊಂಡು ಆಡಳಿತ ವಿರೋಧಿ ಅಲೆಯಲ್ಲಿ ಕಾಂಗ್ರೆಸ್‌ನ್ನು ಎಸ್ಪಿ ಮುಳುಗಿಸಿದೆ.
ಬಿಜೆಪಿ ಮುಂದೆ ಬಿಎಸ್ಪಿ -ಕಾಂಗ್ರೆಸ್‌ ಮೈತ್ರಿ ಕೂಟದ ಹೋರಾಟ ಫಲ ನೀಡಿಲ್ಲ ಎಂಬ ವಿಚಾರ ಅರಿವಾಗುತ್ತಲೇ ಮುಖ್ಯ ಮಂತ್ರಿ ಅಖಿಲೇಶ್‌ ಯಾದವ್‌ ಅಧಿಕಾರ ಉಳಿಸಿಕೊಳ್ಳುವ ಉದ್ದೇಶಕ್ಕಾಗಿ ಬಿಎಸ್‌ಪಿಯ ನೆರವು ಪಡೆಯುವ ಚಿಂತನೆ ಮಾಡಿದ್ದರು. ಆದರೆ ಬಿಎಸ್‌ಪಿ ನೆಲಕಚ್ಚಿದೆ.
1991ರಲ್ಲಿ ರಾಮ ಮಂದಿರ ಮತ್ತು ಎಲ್ ಕೆ ಅಡ್ವಾಣಿಯ ರಥಯಾತ್ರೆ ಪರಿಣಾಮವಾಗಿ ಬಿಜೆಪಿ 221 ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು.  1997ರಲ್ಲಿ ಕೊನೆಯ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ 2002ರಲ್ಲಿ ಅಧಿಕಾರ ಕಳೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News