×
Ad

ಓಲೈಕೆಯ ರಾಜಕಾರಣದ ವಿರುದ್ಧ ಜನತೆಯ ತೀರ್ಪು: ಯೋಗಿ ಆದಿತ್ಯನಾಥ್

Update: 2017-03-11 13:21 IST

ಗೋರಖ್‌ಪುರ, ಮಾ.11: ‘‘ಉತ್ತರಪ್ರದೇಶದ ಜನತೆ ಬಿಜೆಪಿಗೆ ಭಾರೀ ಬಹುಮತ ನೀಡುವ ಮೂಲಕ ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟ ಹಾಗೂ ಬಹುಜನ ಸಮಾಜವಾದಿ ಪಕ್ಷದ ಅಲ್ಪ ಸಂಖ್ಯಾತರ ಓಲೈಕೆಯ ರಾಜಕಾರಣದ ವಿರುದ್ಧ ತೀರ್ಪು ನೀಡಿದ್ದಾರೆ’’ ಎಂದು ಬಿಜೆಪಿಯ ಸಂಸದ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.

‘‘ಬಿಜೆಪಿಯ ಚುನಾವಣೆಯ ಪ್ರಚಾರ ಸಂಪೂರ್ಣವಾಗಿ ಧನಾತ್ಮಕವಾಗಿತ್ತು. ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ ಹಾಗೂ ಬಿಎಸ್ಪಿ ಪಕ್ಷಗಳು ಮುಸ್ಲಿಮರ ಓಲೈಕೆಯತ್ತಲೇ ಹೆಚ್ಚು ಗಮನ ನೀಡಿವೆ. ಇಂದಿನ ಅಸೆಂಬ್ಲಿ ಫಲಿತಾಂಶ ಓಲೈಕೆಯ ರಾಜಕಾರಣವನ್ನು ಜನತೆ ತಿರಸ್ಕರಿಸಿದ್ದಾರೆ ಎಂದು ತೋರಿಸುತ್ತಿದೆ’’ ಎಂದು ಹೇಳಿದರು.

ಶೀಘ್ರವೇ ರಾಮಮಂದಿರ ನಿರ್ಮಾಣವಾಗಲಿದೆ:

ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರ ವಹಿಸಿಕೊಂಡ ತಕ್ಷಣ ಬಹುಚರ್ಚಿತ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದು ಆದಿತ್ಯನಾಥ್ ಘೋಷಿಸಿದರು.

‘‘ರಾಮಮಂದಿರ ನಮ್ಮ ಕಾರ್ಯಸೂಚಿಯಲ್ಲಿರುವ ಪ್ರಮುಖ ವಿಷಯ. ನಾವು ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಯನ್ನು ಈಡೇರಿಸಲಿದ್ದೇವೆ’’ ಎಂದು ಆದಿತ್ಯನಾಥ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News