ಉತ್ತರ ಪ್ರದೇಶ ಚುನಾವಣೆ - ಈ ಬಾರಿಯ ಕೆಲವು ವಿಶೇಷತೆಗಳು

Update: 2017-03-11 11:42 GMT

►ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂದಿ ಉತ್ತರ ಪ್ರದೇಶದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ

********

►ಪ್ರಮುಖ ಸ್ಟಾರ್  ಪ್ರಚಾರಕಿಯಾಗಿದ್ದರೂ ಪ್ರಿಯಾಂಕ ಗಾಂಧಿ ಒಂದೇ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

********

►1960 ನಂತರ ಇದೇ ಮೊದಲ ಬಾರಿ ಮುಲಾಯಂ ಸಿಂಗ್ ಯಾದವ್  ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿಲ್ಲ.

********

►ಮುಲಾಯಂ ಸಿಂಗ್ ಅವರು ಅಪರ್ಣ ಯಾದವ್, ಶಿವಪಾಲ ಯಾದವ್ ಮತ್ತು ಪ್ರಶಾಂತ ಯಾದವ್  ಅವರ ಪರ ಮಾತ್ರ ಪ್ರಚಾರ ನಡೆಸಿದರು

********

►ಕಡೆಗಣಿಸಲ್ಪಟ್ಟ ಶಿವಪಾಲ್ ಯಾದವ್ ತನ್ನ ಕ್ಷೇತ್ರದಲ್ಲಿ ಮಾತ್ರ ಪ್ರಚಾರದಲ್ಲಿ ಭಾಗವಹಿಸಿ ಉಳಿದ ಕ್ಷೇತ್ರಗಳತ್ತ ತಲೆಹಾಕಲಿಲ್ಲ. 

********

►ಇದೇ ಮೊದಲ ಬಾರಿಗೆ  ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿಲ್ಲ. 

********

►ಮೋದಿ ಉತ್ತರ ಪ್ರದೇಶದಲ್ಲಿ  23 ಬೃಹತ್ ರ‍್ಯಾಲಿಗಳನ್ನು ನಡೆಸಿದರು. ಒಂದೇ ರಾಜ್ಯದಲ್ಲಿ ಪ್ರಧಾನಿಯೊಬ್ಬರು ಇಷ್ಟು ಅಬ್ಬರದ ಪ್ರಚಾರ ನಡೆಸಿದ್ದು ಇದೇ ಮೊದಲು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News