×
Ad

ಉತ್ತರ ಪ್ರದೇಶದಲ್ಲಿ ಬಿಎಸ್ಪಿಯ ಕತೆ ಮುಗಿದಿದೆ: ಅಠವಳೆ

Update: 2017-03-12 14:32 IST

ಲಕ್ನೊ,ಮಾ.12: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಇದರ ರಾಷ್ಟ್ರೀಯ ಅಧ್ಯಕ್ಷ ಕೇಂದ್ರ ಸಾಮಾಜಿಕ ನ್ಯಾಯ ಸಚಿವ ರಾಮದಾಸ್ ಅಠಾವಳೆ ಉತ್ತರ ಪ್ರದೇಶದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಎ) ಮತ್ತು ಬಿಜೆಪಿಯ ಸಖ್ಯದೊಂದಿಗೆ ದಲಿತರು ಕೈಜೋಡಿಸಿದ್ದಾರೆ. ಇದರ ಪರಿಣಾಮ ಬಹುಜನ ಸಮಾಜ ಪಾರ್ಟಿಯ ಅಸ್ಥಿತ್ವ ಇಲ್ಲದಾಗಿದೆ ಎಂದು ಹೇಳಿದ್ದಾರೆ.

 ಉತ್ತರಪ್ರದೇಶದಲ್ಲಿ ದಲಿತರು, ಹಿಂದುಳಿದವರು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯ ನಿಜ ಬಣ್ಣವನ್ನು ಅರಿತುಕೊಂಡರು. ಬಿಎಸ್ಪಿಯ ಬದಲಿಯಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಅವರಿಗೆ ಸಿಕ್ಕಿದೆ. ಆರ್‌ಪಿಐ ಉತ್ತರ ಪ್ರದೇಶದ 360 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿತ್ತು. ಉಳಿದ 43 ಕ್ಷೇತ್ರಗಳಲ್ಲಿ ಅವರ ಸ್ಪರ್ಧಾಳುಗಳು ಚುನಾವಣೆಗೆ ನಿಂತಿದ್ದರು. ಆದ್ದರಿಂದ ಬಿಎಸ್ಪಿ ಸಂಪೂರ್ಣ ನೆಲ ಕಚ್ಚಿತು ಎಂದು ಅಠಾವಳೆ ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News