ಅಮಾನತುಗೊಂಡಿದ್ದ ಮೆಸ್ಕಾಂ ಜೆಇ ಮರುನೇಮಕ

Update: 2017-03-12 18:39 GMT

 ಪುತ್ತೂರು, ಮಾ.12: ಇಲ್ಲಿನ ಸರ್ವೆ ಗ್ರಾಮದ ಸೊರಕೆ ಸಮೀಪದ ಪರಂಟೋಲು ಎಂಬಲ್ಲಿ ಮಾ.2ರಂದು ಎಚ್‌ಟಿ ಲೈನ್ ವಿದ್ಯುತ್ ಸ್ಪರ್ಶಿಸಿ ಲೈನ್‌ಮೆನ್ ಮೃತಪಟ್ಟ ಘಟನೆಗೆ ಸಂಬಂಸಿ ಕರ್ತವ್ಯಲೋಪ ಆರೋಪದಡಿ ಅಮಾನತುಗೊಂಡಿದ್ದ ಮೆಸ್ಕಾಂ ಜೂನಿಯರ್ ಇಂಜಿನಿಯರ್ ರಮೇಶ್‌ರನ್ನು ಇಲಾಖೆ ಮರುನೇಮಕಗೊಳಿಸಿ ನೆಲ್ಯಾಡಿ ಶಾಖೆಗೆ ವರ್ಗಾಯಿಸಲಾಗಿದೆ.

ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ಬರುವ ಸವಣೂರು ಮೆಸ್ಕಾಂ ಉಪವಲಯದಲ್ಲಿ ಕಳೆದ 1 ವರ್ಷದಿಂದ ಜೂನಿಯರ್ ಲೈನ್‌ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಗಲಕೋಟೆ ತಾಲೂಕಿನ ನೀರಳಕೆರೆ ನಿವಾಸಿ ಶ್ರೀಶೈಲ ಮಚಗಂಡಿ(27) ಎಂಬವರು ಮೃತಪಟ್ಟಿದ್ದರು.

 ತರಬೇತಿ ಅವಯ ಲೈನ್‌ಮೆನ್‌ಗಳನ್ನು ವಿದ್ಯುತ್ ಕಂಬಕ್ಕೆ ಹತ್ತಿಸಬಾರದು ಎಂಬ ಆದೇಶವಿದ್ದರೂ ಮೆಸ್ಕಾಂ ಇಲಾಖೆಯ ಅಕಾರಿಗಳ ನಿರ್ಲಕ್ಷವೇ ಘಟನೆಗೆ ಕಾರಣ ಎಂಬ ಆರೋಪ ಈ ಸಂದರ್ಭ ವ್ಯಕ್ತವಾಗಿತ್ತು. ಘಟನೆಗೆ ಸಂಬಂಸಿ ಸವಣೂರು ಮೆಸ್ಕಾಂ ಶಾಖೆಯ ಜೂನಿಯರ್ ಇಂಜಿನಿಯರ್ ರಮೇಶ್ ಬಿ. ಮತ್ತು ಲೈನ್‌ಮೆನ್ ಸಿದ್ದಯ್ಯರನ್ನು ಕರ್ತವ್ಯ ಲೋಪ ಆರೋಪದಡಿ ಮಾ.3ರಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

 ಆ ಬಳಿಕದ ಬೆಳವಣಿಗೆಯಲ್ಲಿ ಅಮಾನತುಗೊಂಡಿದ್ದ ಜೂನಿಯರ್ ಇಂಜಿನಿಯರ್ ರಮೇಶ್‌ರನ್ನು ಕರ್ತವ್ಯಕ್ಕೆ ಪುನರ್‌ನೇಮಕ ಮಾಡುವಂತೆ ಪುತ್ತೂರು ವಿಭಾಗದ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಶಿಾರಸು ಮಾಡಿದ್ದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣಾ ಹಕ್ಕನ್ನು ಕಾಯ್ದಿರಿಸಿ ಮಂಗಳೂರು ಮೆಸ್ಕಾಂ ಅೀಕ್ಷಕ ಇಂಜಿನಿಯರ್ ಮತ್ತು ಶಿಸ್ತುಪ್ರಾಕಾರಿ ಡಿ.ನಾಗರಾಜ್ ರಮೇಶ್ ಅವರನ್ನು ಅಮಾನತುಗೊಂಡ 8 ದಿನಗಳಲ್ಲಿಯೆ ಕಡಬ ಉಪವಿಭಾಗದ ನೆಲ್ಯಾಡಿ ಮೆಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆಗೆ ಮರುನೇಮಕಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News