×
Ad

ಮೇ 27 ರಿಂದ ರಮಝಾನ್ ಆರಂಭದ ನಿರೀಕ್ಷೆ

Update: 2017-03-13 15:57 IST

ದುಬೈ,ಮಾ.13: ಪವಿತ್ರ ರಮಝಾನ್ ಮಾಸವು ಚಂದ್ರದರ್ಶನವನ್ನು ಅವಲಂಬಿಸಿ ಮೇ 27ರಿಂದ ಆರಂಭಗೊಂಡು ಜೂನ್ 24ರಂದು ಅಂತ್ಯಗೊಳ್ಳುವ ಸಾಧ್ಯತೆಗಳಿವೆ.

ಯುಎಇಯಲ್ಲಿ ರಮಝಾನ್ ಮಾಸದಲ್ಲಿ ಕೆಲಸದ ಅವಧಿಯನ್ನು ಎರಡು ಗಂಟೆ ಕಡಿತಗೊಳಿಸಲಾಗುತ್ತದೆ.

ಇಸ್ಲಾಮಿಕ್ ಕ್ಯಾಲೆಂಡರ್‌ನಂತೆ ರಮಝಾನ್ ಮಾಸ ಪ್ರತಿ ವರ್ಷ ನಿಗದಿತ ದಿನಾಂಕದಂದು ಆರಂಭಗೊಳ್ಳುತ್ತದೆ. ಆದರೆ ಗ್ರೆಗರಿಯನ್ ಕ್ಯಾಲೆಂಡರ್‌ನಲ್ಲಿ ದಿನಾಂಕ ಬದಲಾಗುತ್ತಿರುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರಮಾನ ಮತ್ತು ಗ್ರೆಗರಿಯನ್ ಕ್ಯಾಲೆಂಡರ್ ಸೌರಮಾನವಾಗಿರುವುದು ಇದಕ್ಕೆ ಕಾರಣವಾಗಿದೆ.

ಚಂದ್ರದರ್ಶನವನ್ನು ಅವಲಂಬಿಸಿ ರಮಝಾನ್ ಆರಂಭದ ದಿನವು ದೇಶದಿಂದ ದೇಶಕ್ಕೆ ಬದಲಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News