×
Ad

ನಂಬರ್ ಒನ್ ಪಕ್ಷವಾದರೂ ಸರಕಾರ ರಚಿಸುವಲ್ಲಿ ವಿಫಲ

Update: 2017-03-14 13:14 IST

ಪಣಜಿ, ಮಾ.14: ರಾಜ್ಯದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸಣ್ಣಪುಟ್ಟ ಪಕ್ಷಗಳ ಬೆಂಬಲ ಪಡೆದು ಸರಕಾರ ರಚಿಸಲು ಮುಂದಾಗದೇ ಮಂದಗತಿಯ ನಿರ್ಧಾರ ಕೈಗೊಂಡಿರುವುದಕ್ಕೆ ಕಾಂಗ್ರೆಸ್‌ನ ನೂತನ ಶಾಸಕರು ಹಿರಿಯ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
40 ಸದಸ್ಯರನ್ನು ಒಳಗೊಂಡ ಗೋವಾ ವಿಧಾನಸಭೆಯಲ್ಲಿ 17 ಕ್ಷೇತ್ರಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತಕ್ಕೆ ಮೂರು ಸ್ಥಾನದ ಕೊರತೆಯಿತ್ತು.ಆದರೆ, 13 ಶಾಸಕರನ್ನು ಹೊಂದಿದ್ದ ಬಿಜೆಪಿ ರಾಜ್ಯದ ಸಣ್ಣ-ಪುಟ್ಟ ಪಕ್ಷಗಳ ಬೆಂಬಲವನ್ನು ಪಡೆದುಕೊಂಡು ಸರಕಾರದ ರಚನೆಗೆ ಮುಂದಾಗಿದೆ.
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ, ಕಾಂಗ್ರೆಸ್‌ನ ಹಿರಿಯ ಮುಖಂಡ ವಿಶ್ವಜಿತ್ ಪಿ.ರಾಣೆ ಗೋವಾದ ಉಸ್ತುವಾರಿಯನ್ನು ವಹಿಸಿದ್ದ ಪಕ್ಷದ ಪ್ರಧಾನಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ರಾಜ್ಯದ ಜನತೆ ಕಾಂಗ್ರೆಸ್‌ಗೆ ಸರಕಾರ ರಚಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಿದ್ದಾರೆ. ಆದರೆ, ನಮ್ಮ ಮುಖಂಡರ ಮೂರ್ಖತನದಿಂದ ನಾವು ಅವಕಾಶವನ್ನು ಕೈಚೆಲ್ಲಿದ್ದೇವೆಂದು’’ ರಾಣೆ ಹೇಳಿದ್ದಾರೆ.
‘‘ನನಗೆ ಕಾಂಗ್ರೆಸ್ ಪಕ್ಷದ ಬಗ್ಗೆ ವೈರಾಗ್ಯ ಬಂದಿದೆ. ಎಲ್ಲ ಶಾಸಕರು ಬಂಡಾಯ ಏಳುವಂತೆ ನನಗೆ ಒತ್ತಡಹಾಕುತ್ತಿದ್ದಾರೆ. ಆದರೆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಗೋಸ್ಕರ ನಾನು ಹಿಂದೇಟು ಹಾಕುತ್ತಿದ್ದೇನೆ’’ ಎಂದು ಗೋವಾದಲ್ಲಿ ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಪ್ರತಾಪ್ ಸಿನ್ಹಾ ರಾಣಾ ಅವರ ಪುತ್ರನಾಗಿರುವ ವಿಶ್ವಜಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News