ಗೋವಾ ಸಿಎಂ ಆಗಿ ಪಾರಿಕ್ಕರ್ ಪದಗ್ರಹಣ
Update: 2017-03-14 17:43 IST
ಪಣಜಿ, ಮಾ.14: ಗೋವಾದ ನೂತನ ಮುಖ್ಯ ಮಂತ್ರಿಯಾಗಿ ಮನೋಹರ್ ಪರಿಕ್ಕರ್ ಇಂದು ಪದಗ್ರಹಣ ಮಾಡಿದರು.
ನಾಲ್ಕನೆ ಬಾರಿ ಗೋವಾ ಸಿಎಂ ಆಗಿರುವ ಪರಿಕ್ಕರ್ ಅವರಿಗೆ ಪಣಜಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಗವರ್ನರ್ ಮೃದುಲಾ ಸಿನ್ಹಾ ಪ್ರಮಾಣವಚನ ಬೋಧಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರುಗಳಾದ ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.