ಹಾಲು,ಮೊಟ್ಟೆ,ಮಾಂಸ ಉತ್ಪಾದನೆಯಲ್ಲಿ ಏರಿಕೆ : ಸರಕಾರ

Update: 2017-03-14 13:11 GMT

ಹೊಸದಿಲ್ಲಿ,ಮಾ.14: ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ಹಾಲು,ಮೊಟ್ಟೆ ಮತ್ತು ಮಾಂಸದ ಉತ್ಪಾದನೆಯಲ್ಲಿ ಏರಿಕೆಯಾಗಿದೆ ಎಂದು ಸರಕಾರವು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದೆ. 

15 ಮಿ.ಟನ್‌ನೊಂದಿಗೆ ಭಾರತವು ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ತಿಳಿಸಿದ ಕೃಷಿಸಚಿವ ರಾಧಾಮೋಹನ ಸಿಂಗ್ ಅವರು, 2015ರ ಜುಲೈ-ಅಕ್ಟೋಬರ್ ಅವಧಿಗೆ ಹೋಲಿಸಿದರೆ 2016ರ ಇದೇ ಅವಧಿಯಲ್ಲಿ ಹಾಲು,ಮೊಟ್ಟೆ ಮತ್ತು ಮಾಂಸ ಉತ್ಪಾದನೆ ಅನುಕ್ರಮವಾಗಿ ಶೇ.4.30,ಶೇ.6.42 ಮತ್ತು ಶೇ.8.74 ರಷ್ಟು ಏರಿಕೆಯಾಗಿವೆ ಎಂದರು.

ಹಾಲು ಮತ್ತು ಮೊಟ್ಟೆಗಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ರಾಜ್ಯಗಳಿಗೆ ನೆರವಾಗಲು ವಿವಿಧ ಕಾರ್ಯಕ್ರಮಗಳು ಜಾರಿಯಲ್ಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News