‘ನಿರ್ದಯ’ ದಾಳಿ : ಅಮೆರಿಕಕ್ಕೆ ಉತ್ತರ ಕೊರಿಯ ಎಚ್ಚರಿಕೆ

Update: 2017-03-14 14:35 GMT

ಸಿಯೋಲ್ (ದಕ್ಷಿಣ ಕೊರಿಯ), ಮಾ. 14: ಅಮೆರಿಕದ ವಿಮಾನವಾಹಕ ಯುದ್ಧ ನೌಕೆ ‘ಯುಎಸ್‌ಎಸ್ ಕಾರ್ಲ್ ವಿನ್ಸನ್’ ನೇತೃತ್ವದ ಅಮೆರಿಕ ಸೇನೆ ತನ್ನ ಸಾರ್ವಭೌಮತ್ವವನ್ನು ಉಲ್ಲಂಘಿಸಿದರೆ ‘ನಿರ್ದಯ’ ದಾಳಿಗಳನ್ನು ನಡೆಸಲಾಗುವುದು ಎಂದು ಉತ್ತರ ಕೊರಿಯ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ದಕ್ಷಿಣ ಕೊರಿಯದೊಂದಿಗೆ ಜಂಟಿ ಸಮರಾಭ್ಯಾಸ ನಡೆಸಲು ಅಮೆರಿಕ ನೌಕಾ ಪಡೆಯು ಆಗಮಿಸುತ್ತಿದೆ.ಅಮೆರಿಕದ ಸೇನೆಯ ಆಗಮನವು ತನ್ನ ಮೇಲೆ ದಾಳಿ ನಡೆಸುವ ಯೋಜನೆಯ ಭಾಗವಗಿದೆ ಎಂದು ಉತ್ತರ ಕೊರಿಯ ಆರೋಪಿಸಿದೆ.

‘‘ಅವರು ಡಿಪಿಆರ್‌ಕೆ (ಉತ್ತರ ಕೊರಿಯದ ಅಧಿಕೃತ ಹೆಸರು)ಯ ಸಾರ್ವಭೌಮತ್ವ ಮತ್ತು ಘನತೆಯನ್ನು ಸ್ವಲ್ಪವೇ ಉಲ್ಲಂಘಿಸಿದರೂ, ಅದರ ಸೇನೆಯು ಭೂಮಿ, ಆಕಾಶ, ಸಮುದ್ರ ಮತ್ತು ನೀರಿನ ಅಡಿಯಿಂದ ಅತಿ ನಿಖರ ದಾಳಿಗಳನ್ನು ನಡೆಸುವುದು’’ ಎಂದು ಉತ್ತರ ಕೊರಿಯದ ಸುದ್ದಿ ಸಂಸ್ಥೆ ಕೆಸಿಎನ್‌ಎ ಹೇಳಿದೆ.

ಉತ್ತರ ಕೊರಿಯದ ಅಧಿಕೃತ ಹೆಸರು ‘ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯ (ಡಿಪಿಆರ್‌ಕೆ) ಎಂಬುದಾಗಿದೆ.

 ‘‘ಮಾರ್ಚ್ 11 ರಂದು ಹಲವಾರು ಶತ್ರು ವಿಮಾನವಾಹಕ ನೌಕೆಯಿಂದ ಹಾರಾಟ ನಡೆಸಿದ ಹಲವಾರು ವಿಮಾನಗಳು ಡಿಪಿಆರ್‌ಕೆಯ ವಾಯು ಮತ್ತು ಜಲಪ್ರದೇಶಗಳಿಗೆ ಸಮೀಪದ ಮಾರ್ಗದಲ್ಲಿ ಹಾರಿ ಹೋಗಿವೆ. ಉತ್ತರ ಕೊರಿಯದ ನೆಲೆಗಳ ಮೇಲೆ ಬಾಂಬ್‌ಗಳನ್ನು ಹಾಕುವ ಹಾಗೂ ಅಚ್ಚರಿಯ ದಾಳಿಗಳನ್ನು ನಡೆಸುವ ತಾಲೀಮನ್ನು ಅವರು ನಡೆಸುತ್ತಿದ್ದಾರೆ’’ ಎಂದು ಕೆಸಿಎನ್‌ಎ ಹೇಳಿಕೊಂಡಿದೆ.

ಯೋಜಿತ ಕಾರ್ಯಕ್ರಮ: ಅಮೆರಿಕ ನೌಕಾಪಡೆ

ಯುಎಸ್‌ಎಸ್ ಕಾರ್ಲ್ ವಿನ್ಸನ್ ಈ ವಲಯಕ್ಕೆ ನಿಯಮಿತ ಹಾಗೂ ನಿಗದಿತ ಭೇಟಿ ನೀಡುತ್ತಿದೆ ಹಾಗೂ ಈ ಅವಧಿಯಲ್ಲಿ ಮಿತ್ರ ದೇಶ ದಕ್ಷಿಣ ಕೊರಿಯದೊಂದಿಗೆ ಜಂಟಿ ಯುದ್ಧಾಭ್ಯಾಸದಲ್ಲಿ ಪಾಲ್ಗೊಳ್ಳಲಿದೆ ಎಂದು ಅಮೆರಿಕ ನೌಕಾ ಪಡೆಯ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News