ಎಂ.ಎಂ ಹಸನ್ ಕೆಪಿಸಿಸಿ ಅಧ್ಯಕ್ಷರಾಗಲಿ: ಕೇರಳ ಕಾಂಗ್ರೆಸ್ಸ್ ನ ಎ. ಗ್ರೂಪ್
ತಿರುವನಂತಪುರಂ,ಮಾ. 15: ಕೆ.ಪಿ.ಸಿ.ಸಿ ಅಧ್ಯಕ್ಷ ಸ್ಥಾನದ ಕುರಿತು ಕೇರಳದಲ್ಲಿ ಕಾಂಗ್ರೆಸ್ಸ್ ನೊಳಗೆ ವಿವಾದಭುಗಿಲೆದ್ದಿದೆ. ಎಂ.ಎಂ. ಹಸನ್‌ರಿಗೆ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಡಬೇಕೆಂದು ಎ. ಗ್ರೂಪ್‌ನ ಅಭಿಪ್ರಾಯವನ್ನು ರಮೇಶ್ ಚೆನ್ನಿತ್ತಲರಿಗೆ ಉಮ್ಮನ್ ಚಾಂಡಿ ತಿಳಿಸಿದ್ದಾರೆ. ಉಮ್ಮನ್ ಚಾಂಡಿ ಕೇರಳದ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ರಮೇಶ್ ಚೆನ್ನಿತ್ತಲ ಕೇರಳ ವಿಧಾನಸಭೆಯಲ್ಲಿ ಈಗ ಪ್ರತಿಪಕ್ಷನಾಯಕನಾಗಿದ್ದಾರೆ.
ರಾಜ್ಯದ ಕಾಂಗ್ರೆಸ್ ನಾಯಕರು ಒಟ್ಟಾಗಿ ಈ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಬೇಕು ಎಂದು ಚಾಂಡಿ ಚೆನ್ನಿತ್ತಲರಿಗೆ ಹೇಳಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರನ್ನು ಹೈಕಮಾಂಡ್ ತೀರ್ಮಾನಿಸಲಿ ಎನ್ನುವ ತೀರ್ಮಾನ ಐ ಗ್ರೂಪ್ ವ್ಯಕ್ತಪಡಿಸಿದೆ. ಕೇರಳದ ಕಾಂಗ್ರೆಸ್‌ನಲ್ಲಿ ಐ ಮತ್ತು ಎ ಎನ್ನುವ ಎರಡು ಗುಂಪುಗಳಿವೆ.
ಮಲಪ್ಪುರಂ ಉಪಚುನಾವಣೆಯವರೆಗಾದರೂ ಹಸನ್ ಅಧ್ಯಕ್ಷರಾಗಿ ಮುಂದುವರಿಯಬೇಕು. ಆನಂತರ ಉಮ್ಮನ್ ಚಾಂಡಿಯನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವುದು ಎ ಗ್ರೂಪ್‌ನ ಯೋಜನೆಯಾಗಿದೆ. ಈ ಹಿಂದೆ ಗುಂಪುಗಳು ಒಟ್ಟಿಗೆ ಕುಳಿತಾಗಲೂ ಜಿ. ಕಾರ್ತಿಕೇಯನ್‌ರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿರಲಿಲ್ಲ ಎಂದು ಉಮ್ಮನ್ ಚಾಂಡಿ ಬೆಟ್ಟು ಮಾಡಿದ್ದಾರೆ.