ಪಾಕ್ : 20 ವರ್ಷಗಳ ಬಳಿಕ ಜನಗಣತಿ ಆರಂಭ

Update: 2017-03-15 13:51 GMT

ಇಸ್ಲಾಮಾಬಾದ್, ಮಾ. 15: ಪಾಕಿಸ್ತಾನ ಸುಮಾರು ಎರಡು ದಶಕಗಳ ಬಳಿಕ ಮೊದಲ ಬಾರಿಗೆ ಇಂದು ದೇಶವ್ಯಾಪಿ ಜನಗಣತಿ ಆರಂಭಿಸಿದೆ.
ಮುಖ್ಯ ಲೆಕ್ಕಾಧಿಕಾರಿ ಅಸಿಫ್ ಬಾಜ್ವ ಪಾಕಿಸ್ತಾನದ ಬೃಹತ್ ರಾಜ್ಯ ಪಂಜಾಬ್‌ನ ಅಟ್ಟಾಕ್ ಜಿಲ್ಲೆಯಿಂದ ಆರನೆ ಜನಗಣತಿಗೆ ಚಾಲನೆ ನೀಡಿದರು.

ಈ ಬೃಹತ್ ಕಾರ್ಯದಲ್ಲಿ 84,000 ಗಣತಿದಾರರು ಸೇರಿದಂತೆ 1,19,000 ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ ಹಾಗೂ 2 ಲಕ್ಷ ಸೈನಿಕರು ಭದ್ರತೆ ನೀಡುವುದರೊಂದಿಗೆ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಪ್ರಕ್ರಿಯೆಯ ಮೇಲೆ ನಿಗಾ ಇಡುತ್ತಿದ್ದಾರೆ.

ಮೊದಲ ಹಂತದ ಮನೆ ಮತ್ತು ಜನ ಸಂಖ್ಯೆ ಗಣತಿ ಎಪ್ರಿಲ್ 15ರವರೆಗೆ ಮುಂದುವರಿಯಲಿದೆ. ಹತ್ತು ದಿನಗಳ ವಿರಾಮದ ಬಳಿಕ ಎರಡನೆ ಹಂತವು ಎಪ್ರಿಲ್ 25ರಿಂದ ಆರಂಭಗೊಂಡು ಮೇ 25ರವರೆಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News