×
Ad

ಕರೀಂ ಮೊರಾನಿ ನಿರೀಕ್ಷಣಾ ಜಾಮೀನು ರದ್ದು : ಪೊಲೀಸರೆದುರು ಶರಣಾಗಲು ಕೋರ್ಟ್ ಆದೇಶ

Update: 2017-03-15 21:22 IST

ಹೈದರಾಬಾದ್, ಮಾ.15: ದಿಲ್ಲಿ ಮೂಲದ ಮಹಿಳೆಯೋರ್ವಳ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಎದುರಿಸುತ್ತಿರುವ ಬಾಲಿವುಡ್ ಚಿತ್ರನಿರ್ಮಾಪಕ ಕರೀಂ ಮೊರಾನಿ ಅವರ ನಿರೀಕ್ಷಣಾ ಜಾಮೀನನ್ನು ಸ್ಥಳೀಯ ನ್ಯಾಯಾಲವೊಂದು ರದ್ದುಗೊಳಿಸಿದೆ.

ನಿರೀಕ್ಷಣಾ ಜಾಮೀನು ರದ್ದುಗೊಳಿಸಿರುವ ಎಲ್.ಬಿ. ನಗರದ ನಾಲ್ಕನೇ ಹೆಚ್ಚುವರಿ ಮೆಟ್ರೊಪಾಲಿಟನ್ ಸೆಷನ್ಸ್ ಕೋರ್ಟ್ , ಹಯಾತ್‌ನಗರ ಪೊಲೀಸ್ ಠಾಣೆಯೆದುರು ಮಾ.22 ಅಥವಾ ಅದಕ್ಕೂ ಮೊದಲು ಶರಣಾಗುವಂತೆ ನಿರ್ದೇಶಿಸಿತು.

  ಮದುವೆಯಾಗುವುದಾಗಿ ನಂಬಿಸಿ ಮೊರಾನಿ 2015ರಲ್ಲಿ ಮುಂಬೈಯ ವಿವಿಧೆಡೆ ಮತ್ತು ಹೈದರಾಬಾದಿನ ಸಿನೆಮಾ ಸ್ಟುಡಿಯೋದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ 25ರ ಹರೆಯದ ಮಹಿಳೆ ದೂರು ನೀಡಿದ್ದಳು. ಈಕೆ ಕರೀಂ ಮೊರಾನಿಯ ಮಗಳ ಸ್ನೇಹಿತೆ ಎನ್ನಲಾಗಿದೆ. ಬಳಿಕ ಮೊರಾನಿ ನಿರೀಕ್ಷಣಾ ಜಾಮೀನು ಪಡೆದಿದ್ದರು.

ಇದನ್ನು ವಿರೋಧಿಸಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದೀಗ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರದ್ದುಗೊಳಿಸಿ ಮಾರ್ಚ್ 22ರ ಮೊದಲು ಪೊಲೀಸರೆದುರು ಶರಣಾಗಲು ಸೂಚಿಸಿದೆ.

ಕರೀಂ ಮೊರಾನಿ ‘ಯೋಧ, ದಮ್’.. ಇತ್ಯಾದಿ ಸಿನೆಮಾನಗಳನ್ನು ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News