ಪ.ಬಂ.ಗ್ರಾ.ಪಂ.ಗಳಿಗೆ 210 ಮಿ.ಡಾ. ಸಾಲ ನೀಡಲು ವಿಶ್ವಬ್ಯಾಂಕ್ ಒಪ್ಪಿಗೆ

Update: 2017-03-16 14:04 GMT

ಕೋಲ್ಕತಾ,ಮಾ.16: ಪ.ಬಂಗಾಳದಾದ್ಯಂತ ಗ್ರಾಮ ಪಂಚಾಯತ್‌ಗಳು ತಮಗೆ ಲಭ್ಯವಿರುವ ವಿವೇಚನಾ ನಿಧಿಗಳನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಅವುಗಳನ್ನು ಬಲಪಡಿಸಲು 210 ಮಿ.ಡಾ.ಸಾಲ ನೀಡಲು ವಿಶ್ವಬ್ಯಾಂಕ್ ಒಪ್ಪಿಕೊಂಡಿದೆ.

14ನೇ ಹಣಕಾಸು ಆಯೋಗ ಮತ್ತು ನಾಲ್ಕನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಹಿನ್ನೆಲೆಯಲ್ಲಿ ಈ ಗ್ರಾಮ ಪಂಚಾಯತ್‌ಗಳಿಗೆ ಹರಿದು ಬರುವ ಒಟ್ಟು ನಿಧಿಗಳು 2020ರ ವೇಳೆಗೆ ದುಪ್ಪಟ್ಟಿಗಿಂತಲೂ ಹೆಚ್ಚಾಗಲಿವೆ.

ಎರಡನೇ ಹಂತದ ಗ್ರಾಮ ಪಂಚಾಯತ್‌ಗಳ ಸಬಲೀಕರಣ ಕಾರ್ಯಕ್ರಮವು ಅಂತರ್ ಸರಕಾರಿ ಹಣಕಾಸು ವರ್ಗಾವಣೆ ವ್ಯವಸ್ಥೆಯ ಮೂಲಕ ಒದಗಿಸಲಾಗುವ ಈ ನಿಧಿಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ರಾಜ್ಯದಲ್ಲಿಯ ಎಲ್ಲ 3,342 ಪಂಚಾಯತ್‌ಗಳಿಗೆ ನೆರವಾಗಲಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News