×
Ad

ಮಾ.25ರಂದು ಮುಂಬಯಿ ದಾದರ್‌ನಲ್ಲಿ ಸ್ವಲಾತ್ ವಾರ್ಷಿಕ-ಬುರ್ದಾ ಮಜ್ಲಿಸ್

Update: 2017-03-16 19:47 IST

ಮುಂಬಯಿ, ಮಾ.16: ಮಂಜೇಶ್ವರದ ಮಳ್‌ಹರ್ ವಿದ್ಯಾ ಸಂಸ್ಥೆಯ ಮುಂಬಯಿ ಘಟಕದ ವತಿಯಿಂದ ಪ್ರತಿ ತಿಂಗಳು ನಡೆಸಿ ಬರುವ ಸ್ವಲಾತ್ ಮಜ್ಲಿಸ್‌ನ 3ನೇ ಸ್ವಲಾತ್ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಮಾರ್ಚ್ 25 ಶನಿವಾರ ದಾದರ್ ವೂರ್ವದ ಲತೀಫಿ ಸುನ್ನಿ ಮಸೀದಿಯಲ್ಲಿ ನಡೆಯಲಿದೆ.

ಸಂಜೆ ಡೊಂಗ್ರಿ ಅಬ್ದುರ್ರಹ್ಮಾನ್ ಬಾಬ ಮಖಾಂ ಝಿಯಾರತ್ ನಡೆಯಲಿದ್ದು, ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ ನೇತೃತ್ವವನ್ನು ವಹಿಸಲಿದ್ದಾರೆ. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಹಸನ್ ಮುಸ್ಲಿಯಾರ್ ಮುಂಬ್ರ ವಹಿಸಲಿದ್ದು, ಮುಫ್ತಿ ಮುಹಮ್ಮದ್ ರಫೀಕ್ ಸಅದಿ ಉದ್ಘಾಟನೆಯನ್ನು ಮಾಡಲಿದ್ದಾರೆ. ಅಬ್ದುಲ್ ಕರೀಂ ಆಶ್ರಫಿ ಮತ್ತು ಮುಫ್ತಿ ಶರೀಫ್ ನಿಝಾಮಿ ರಾಜಾಪುರ್ ಪ್ರಭಾಷಣ ಮಾಡಲಿದ್ದಾರೆ. ಸಯ್ಯಿದ್ ಅಬ್ದುರಹ್ಮಾನ್ ಶಹೀರ್ ಅಲ್ ಬುಖಾರಿ ಮಳ್‌ಹರ್ ಸ್ವಲಾತ್ ಮಜ್ಲಿಸ್ ಮತ್ತು ಕೂಟು ಪ್ರಾರ್ಥನೆಗೆ ನೇತೃತ್ವವನ್ನು ನೀಡಲಿದ್ದಾರೆ.

ಹಾಫಿಳ್ ಸ್ವಾದಿಕ್ ಅಲಿ ಗೂಡಲ್ಲೂರು ಬುರ್ದಾ ಮಜ್ಲಿಸ್‌ಗೆ ನೇತೃತ್ವವನ್ನು ನೀಡಲಿದ್ದಾರೆ. ಮುಹಮ್ಮದ್ ಸಿಯಾನ್ ಮಂಗಳೂರು ನಅತೇ ಶರೀಫ್ ಆಲಾಪಿಸುವರು. ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ ಆತ್ಮೀಯ ಉಪದೇಶವನ್ನು ನೀಡಲಿದ್ದಾರೆ ಎಂದು ಮಳ್‌ಹರ್ ವಿದ್ಯಾ ಸಂಸ್ಥೆಯ ಮುಂಬಯಿ ಘಟಕ ಮ್ಯಾನೇಜರ್ ಸಿದ್ದೀಕ್ ಮುಸ್ಲಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ರೊನ್ಸ್ ಬಂಟ್ವಾಳ

contributor

Editor - ರೊನ್ಸ್ ಬಂಟ್ವಾಳ

contributor

Similar News