ಪಾದ್ರಿಗೆ ಸಿಕ್ಕಿತು 3000 ಕೋಟಿ ಮೌಲ್ಯದ ರತ್ನ !
Update: 2017-03-17 15:21 IST
ಫ್ರೀಟೌನ್, ಮಾ. 17: ಪಾಸ್ಟರ್‌ಗೆ ಅದೃಷ್ಟ 706 ಕ್ಯಾರೆಟ್ ರತ್ನದ ರೂಪದಲ್ಲಿ ಒಲಿದಿದೆ. ಆಫ್ರಿಕದ ಸಿಯರಾ ಲಿಯೋನ್‌ನಲ್ಲಿ ಉತ್ಖನನ ನಡೆಸುತ್ತಿರುವಾಗ ಪಾಸ್ಟರ್‌ಗೆ ಅನಿರೀಕ್ಷಿತವಾಗಿ ದೊಡ್ಡದಾದ ಒಂದು ರತ್ನದ ಕಲ್ಲು ಸಿಕ್ಕಿದೆ. ಜಗತ್ತಿನಲ್ಲೇ ಅತೀದೊಡ್ಡ ರತ್ನದ ಕಲ್ಲುಗಳಲ್ಲಿ ಇದೂ ಕೂಡಾ ಒಂದು ಎನ್ನಲಾಗಿದೆ. ಪಾಸ್ಟರ್‌ರ ಹೆಸರು ಇಮ್ಯಾನುವೆಲ್ ಮೆಮೊ ಎಂದಾಗಿದೆ.
ಬ್ಯಾಂಕ್ ಲಾಕರಿನಲ್ಲಿ ಇಡುವ ಮೊದಲು ಪಾಸ್ಟರ್ ದೇಶದ ಅಧ್ಯಕ್ಷರ ಮುಂದೆ ರತ್ನವನ್ನು ಇಟ್ಟು ತೋರಿಸಿದ್ದಾರೆ. ದೇಶದ ಹೊರಕ್ಕೆ ಹೋಗದಂತೆ ದೇಶದ ಅಮೂಲ್ಯ ಆಸ್ತಿಯನ್ನು ರಕ್ಷಿಸಿದ್ದಕ್ಕೆ ದೇಶದ ಅಧ್ಯಕ್ಷರುಅವರನ್ನು ಅಭಿನಂದಿಸಿದ್ದಾರೆ. ಪಾಸ್ಟರ್‌ಗೆ ಉತ್ಖನನದಲ್ಲಿ ಸಿಕ್ಕಿದ ರತ್ನವು ಸುಮಾರು 3000 ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುತ್ತದೆ ಎನ್ನಲಾಗಿದೆ.