×
Ad

ಆತ್ಮಹತ್ಯೆಗೆ ಹೊರಟ ದಂಪತಿಯನ್ನು ರಕ್ಷಿಸಿದ ಪೊಲೀಸರು

Update: 2017-03-17 16:49 IST

ಅಡಿಮಾಲಿ, ಮಾ.17: ಬಂಧುಗಳಿಗೆ ಆತ್ಮಹತ್ಯೆ ಪತ್ರ ಬರೆದು ಕಳುಹಿಸಿ ಸಾಯಲು ಪ್ರಯತ್ನಿಸಿದ ದಂಪತಿಯನ್ನು ಪೊಲೀಸರು ಕಾಪಾಡಿದ್ದಾರೆ. ಅಡಿಮಾಲಿ ಪೊಲೀಸರು ದಂಪತಿಯನ್ನು ರಕ್ಷಿಸಿದ್ದಾರೆ. ಮರೆಯೂರು ಕೋವಿಲ್ ಕ್ಕಡವ್‌ನ ದಂಪತಿ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಅಡಿಮಾಲಿಗೆ ಬಂದಿದ್ದರು. ಲಾಡ್ಜನಲ್ಲಿ ಕೋಣೆ ಹಿಡಿದು ವಾಸಿಸಿದರು. ಗುರುವಾರಬೆಳಗ್ಗೆ ನಾಲ್ಕು ಪುಟಗಳ ಆತ್ಮಹತ್ಯೆ ಚೀಟಿ ತಯಾರಿಸಿ ನಗರದ ಆಟೋ ಚಾಲಕನ ಮೂಲಕ ಕಲ್ಲಾರಿಯ ಸಂಬಂಧಿಕರ ಮನೆಗೆ ಕಳುಹಿಸಿದ್ದರು.

ಸಂಬಂಧಿಕರು ಪತ್ರವನ್ನು ಓದಿ ಅಡಿಮಾಲಿ ಪೊಲೀಶರಿಗೆ ಅದನ್ನು ಕೊಟ್ಟಿದ್ದಾರೆ. ಪೊಲೀಸರು ಕೂಡಲೇಇವರ ಮೊಬೈಲ್ ನಂಬರ್‌ನ್ನು ಸಂಗ್ರಹಿಸಿ ಸೈಬರ್ ಸೆಲ್‌ನ ಸಹಾಯದಿಂದ ದಂಪತ ಮುಂಗುಳಂ ತಾಳುಂಗದಲ್ಲಿದ್ದಾರೆಂದುಎಂದು ಪತ್ತೆಹಚ್ಚಿದ್ದರು. ನಂತರ ಊರವರ ಸಹಾಯದಿಂದ ಪೊಲೀಸರು ಹುಡುಕಿ ಕಂಡು ಹಿಡಿದಿದ್ದಾರೆ. ಅಷ್ಟರಲ್ಲೇ ದಂಪತಿ ವಿಷಸೇವಿಸಿ ಆಗಿದೆ. ಇದಕ್ಕೂ ಮೊದಲು ಇವರು ಕೈನರ ತುಂಡರಿಸಿ ಸಾಯಲೆತ್ನಿಸಿದ್ದರು. ದಂಪತಿಯರನ್ನು ಅಡಿಮಾಲಿ ಕೋರ್ಟಿಗೆ ಹಾಜರು ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News