ಯುಜಿಸಿಯಿಂದ ಸಾಮಾಜಿಕ ತಾರತಮ್ಯ ಸಂಶೋಧನಾ ಕೇಂದ್ರಗಳಿಗೆ ಅನುದಾನ ಸ್ಥಗಿತ

Update: 2017-03-17 14:06 GMT

 ಹೊಸದಿಲ್ಲಿ,ಮಾ.17: ಪ್ರಧಾನಿ ನರೇಂದ್ರ ಮೋದಿ ಸರಕಾರದ ಮಾತು ಹಾಗೂ ಕೃತಿಗಳು ಎರಡು ವಿಭಿನ್ನ ದಿಕ್ಕುಗಳಲ್ಲಿ ಸಾಗುತ್ತವೆಂಬುದಕ್ಕೆ ಗುರುವಾರ ಮತ್ತೊಂದು ನಿದರ್ಶನ ದೊರೆತಿದೆ. ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ದಲಿತ ಸಮುದಾಯವನ್ನು ಸಮೀಪಿಸುವ ವಿನೂತನ ಯೋಜನೆಯೊಂದ್ನು ಪ್ರಕಟಿಸಿರುವ ಜೊತೆಗೆ, ಅವರ ಸರಕಾರವು ದೇಶಾದ್ಯಂತದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಸಾಮಾಜಿಕ ತಾರತಮ್ಯವನ್ನು ಅಧ್ಯಯನಕ್ಕಾಗಿನ ಸಂಶೋಧನಾ ಕೇಂದ್ರಳಿಗೆ ನೀಡುತ್ತಿರುವ ಅನುದಾನವನ್ನು ಕಡಿತಗೊಳಿಸಿದೆ.

    ಟೆಲಿಗ್ರಾಫ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು 11ನೇ ಪಂಚವಾರ್ಷಿಕ ಯೋಜನೆಯಡಿ ಸ್ಥಾಪಿಸಲಾದ ಹಾಗೂ 12ನೆ ಪಂಚವಾರ್ಷಿಕ ಯೋಜನೆಯಲ್ಲಿ ನವೀಕರಿಸಲಾದ ಹಲವಾರು ಸಂಶೋಧನಾ ಕೇಂದ್ರಗಳಿಗೆ ಅರ್ಥಿಕ ನೆರವನ್ನು ಕಡಿತಗೊಳಿಸಿದೆ. ಇಂತಹ ಕೇಂದ್ರಗಳನ್ನು ಹೊಂದಿರುವ ವಿಶ್ವವಿದ್ಯಾನಿಲಯಗಳಿಗೆ ಯುಜಿಸಿಯು ಇತ್ತೀಚೆಗೆ ಸುತ್ತೋಲೆಯನ್ನು ಕಳುಹಿಸಿ, ಈ ಯೋಜನೆಗಾಗಿ ನೀಡುತ್ತಿರುವ ಆರ್ಥಿಕ ನೆರವನ್ನು ಮಾರ್ಚ್ 31ರಿಂದ ಕಡಿತಗೊಳಿಸುವುದಾಗಿ ಹೇಳಿದೆ.

 ‘‘ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ ಬಂದಿರುವ ಆದೇಶದ ಪ್ರಕಾರ 12ನೆ ಪಂಚವಾರ್ಷಿಕ ಯೋಜನೆಯ ಮುಕ್ತಾಯದ ಬಳಿಕ ಯುಜಿಸಿಯು, ಸಂಬಂಧಪಟ್ಟ ಕೇಂದ್ರಕ್ಕೆ ಅರ್ಥಿಕ ನೆರವನ್ನು ಒದಗಿಸುವುದಿಲ್ಲವೆಂದು ನಿಮಗೆ ತಿಳಿಸಲು ನನಗೆ ಆದೇಶ ಬಂದಿದೆ’’ ಎಂದು ಯುಜಿಸಿಯ ಅಧೀನಕಾರ್ಯದರ್ಶಿ ಸುಷ್ಮಾ ರಾಥೋರ್ ಆದೇಶದಲ್ಲಿ ತಿಳಿಸಿದ್ದು, ಅದರ ಪ್ರತಿಯೊಂದು ದಿ ಟೆಲಿಗ್ರಾಫ್ ಪತ್ರಿಕೆಗೆ ದೊರೆತಿದೆ.

       ವಿಶ್ವವಿದ್ಯಾನಿಲಯಗಳಿಂದ ಸುಸಜ್ಜಿತವಾದ ವಿಭಾಗಗಳಾಗಿ ಅಭಿವೃದ್ಧಿಪಡಿಸಿರದಂತಹ ಎಲ್ಲಾ ಕೇಂದ್ರಗಳಿಗೂ ಈ ಆದೇಶವನ್ನು ಕಳುಹಿಸಲಾಗಿದೆಯೆಂದು ಮಾನವಸಂಪನ್ಮೂಲಾಭಿವೃದ್ಧಿ ಸಚಿವಾಲಯ ಹಾಗೂ ಯುಜಿಸಿಯ ಮೂಲಗಳು ತಿಳಿಸಿವೆ. ಆದರೆ ಸಾಮಾಜಿಕ ತಾರತಮ್ಯದ ಕುರಿತ ಸಂಶೋಧನಾ ಕೇಂದ್ರಗಳಿಗೆ ಅನುದಾನ ಕಡಿತಗೊಳಿಸುವ ಕೇಂದ್ರ ಸರಕಾರ ಹಾಗೂ ಯುಜಿಸಿಯ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ‘‘ ಯುಜಿಸಿಯು ವೇದ ಅಧ್ಯಯನ ಕುರಿತ ಕೋರ್ಸ್‌ಗಳಿಗೆ ಆರ್ಥಿಕ ನೆರವನ್ನು ನೀಡುತ್ತಿರುವಾಗ, ದಲಿತರು, ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಗಳು, ಸಾಮಾಜಿಕ ಬೇರ್ಪಡುಸುವಿಕೆ ಹಾಗೂ ಮೀಸಲಾತಿಯಂತಹ ಒಳಪಡಿಸುವಿಕೆಯ ನೀತಿಗಳ ಬಗ್ಗೆ ಅಧ್ಯಯವ ನಡೆಸುತ್ತಿರುವ ಈ ಕೇಂದ್ರಗಳನ್ನು ಮುಚ್ಚುತ್ತಿರುವುದು ವಿಷಾದಕರವಾಗಿದೆ’’ ಎಂದು ದಿಲ್ಲಿ ವಿವಿಯಲ್ಲಿ ರಾಜಕೀಯಶಾಸ್ತ್ರದ ಉಪನ್ಯಾಸಕ ಹಾಗೂ ಅಂಬೇಡ್ಕರ್ ಅಧ್ಯಯನ ಕೇಂದ್ರದ ವಿಧ್ವಾಂಸ ಎನ್.ಸಕುಮಾರ್ ಹೇಳುತ್ತಾರೆ.

 ಕೇಂದ್ರ ಹಾಗೂ ಯುಜಿಸಿಯ ಈ ಕ್ರಮದಿಂದಾಗಿ ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಅಧ್ಯಯನ ನಡೆಸುತ್ತಿರುವ ಎಂಫಿಲ್ ಹಾಗೂ ಪಿಎಚ್‌ಡಿ ಇದ್ಯಾರ್ಥಿಗಳು ಇತರ ವಿಭಾಗಗಳಿಗೆ ವರ್ಗಾವಣೆಗೊಳ್ಳಲಿದ್ದರೆ, ಬೋಧಕವರ್ಗವು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವ ಭೀತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News