ಎಸ್‌ಕೆಎಫ್ ಎಲಿಕ್ಸರ್ ಸಂಸ್ಥೆಯಿಂದ ವಾಟರ್ ಪ್ಯೂರಿಫೈಯರ್ ಬಿಡುಗಡೆ

Update: 2017-03-17 18:30 GMT

ಮಂಗಳೂರು, ಮಾ. 17: ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಸಂಸ್ಥೆಯಿಂದ ವಾಟರ್ ಪ್ಯೂರಿಫೈಯರ್ (ಡಿಸ್ಪೆನ್ಸರ್ಸ್‌/ಫಿಲ್ಲಿಂಗ್ ಕೌಂಟರ್)ಗಳ ಸಂಪೂರ್ಣ ಶ್ರೇಣಿ (ಡೊಮೆಸ್ಟಿಕ್, ಇನ್‌ಸ್ಟಿಟ್ಯೂಶನ್ ಹಾಗೂ ಕಮರ್ಶಿಲ್)ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಹಕರು ಈ ವಾಟರ್ ಪ್ಯೂರಿಫೈಯರ್‌ಗಳಿಂದ ತಮ್ಮದೇ ಜಲಮೂಲಗಳಿಂದ ಮಿತದರದಲ್ಲಿ ಶುದ್ಧ ಕುಡಿಯುವ ನೀರನ್ನು ಪಡೆಯಬಹುದು ಎಂದು ಸಂಸ್ಥೆಯ ಅಧ್ಯಕ್ಷ ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲಿಕ್ಸರ್ ಆರ್‌ಒ/ಯುವಿ/ಯುಎಫ್/ಟಿಡಿಎಸ್ ಕಂಟ್ರೋಲ್ ತಂತ್ರಜ್ಞಾನವು ನೀರಿನಲ್ಲಿರುವ ಕಶ್ಮಲಗಳನ್ನೆಲ್ಲಾ ನಿವಾರಿಸಿ ನೀರಿನ ಟಿಡಿಎಸ್, ಪಿಎಚ್ ಮಟ್ಟವನ್ನು ಸಹಜ ಖನಿಜಯುಕ್ತ ನೀರಿನ ಮಟ್ಟಕ್ಕೆ ತಂದು ತಮ್ಮದೇ ಜಲಮೂಲದಿಂದ (ಬಾವಿ, ಬೋರ್‌ವೆಲ್, ಕಾರ್ಪೊರೇಶನ್ ವಾಟರ್) ಶೇ.100 ಪರಿಶುದ್ಧ ಕುಡಿಯುವ ನೀರನ್ನು ಗ್ರಾಹಕರಿಗೆ ಒದಗಿಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಪ್ರಜ್ವಲ್, ವಾಣಿಜ್ಯ ವಿಭಾಗ ನಿರ್ದೇಶಕ ರಾಮ್‌ದಾಸ್ ಪ್ರಭು, ತಾಂತ್ರಿಕ ಮುಖ್ಯಸ್ಥ ವಿಜೇತ್ ಜೈನ್, ಪ್ರಾಂತೀಯ ವ್ಯವಸ್ಥಾಪಕ ಅಮೀರ್ ಹಂಝ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News