×
Ad

ಮಗುವಿನ ಸಹಿತ ಕುಟುಂಬದ ಮೇಲೆ ಆರೆಸ್ಸೆಸ್ ಕಾರ್ಯಕರ್ತರಿಂದ ಹಲ್ಲೆ

Update: 2017-03-18 11:20 IST

ಕಣ್ಣೂರು,ಮಾ.18 : ಇಲ್ಲಿನ ತಲಶ್ಶೇರಿ ಜಗನ್ನಾಥ ದೇವಳಕ್ಕೆ ಕೆಂಪು ಬಣ್ಣದ ಬಟ್ಟೆಗಳನ್ನು ತೊಟ್ಟು ಆಗಮಿಸಿದ್ದ ಆರು ಮಂದಿಯ ಮೇಲೆ ಆರೆಸ್ಸೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಗಾಯಗೊಂಡವರಲ್ಲಿ ಒಂದೂವರೆ ವರ್ಷದ ಮಗುವೊಂದೂ ಸೇರಿದೆ. ಗಾಯಾಳುಗಳೆಲ್ಲರನ್ನೂ ತಲಶ್ಶೇರಿ ಸಹಕಾರಿ ಆಸ್ಪತ್ರೆ ಕಣ್ಣೂರು ಇಲ್ಲಿ ದಾಖಲಿಸಲಾಗಿದೆ.

ಮಾರ್ಚ್ 14, ಮಂಗಳವಾರ ರಾತ್ರಿ ಸುಮಾರು 10:30ಕ್ಕೆ ಘಟನೆ ನಡೆದಿದ್ದು, ಕುಟುಂಬದ ಸದಸ್ಯರನ್ನು ಸುತ್ತುವರಿದ ಸುಮಾರು 150 ಗೂಂಡಾಗಳು ಯಾರು ಕೂಡ ಕೆಂಪು ಬಣ್ಣದ ಬಟ್ಟೆ ಧರಿಸಿ ದೇವಳ ಪ್ರವೇಶಿಸುವಂತಿಲ್ಲ ಎಂದು ಹೇಳಿ ಅಲ್ಲಿ ದೇವರ ದರ್ಶನ ಪಡೆಯುತ್ತಿದ್ದ ಮಹಿಳೆಯರು ಮತ್ತು ಮಕ್ಕಳತ್ತವೂ ಕಲ್ಲೆಸೆದಿದ್ದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಕೊನೆಗೆ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.

ತರುವಾಯ ಭಾರತೀಯ ಜನತಾ ಯುವ ಮೋರ್ಚಾ ನಾಯಕಿ ಲಸಿತಾ ಪಲಕ್ಕಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿ ‘‘ಎರಡು ಹೃದಯಗಳ ಜನರು (ಪಿಣರಾಯಿ ವಿಜಯನ್ ಅವರನ್ನು ಉಲ್ಲೇಖಿಸಿ) ಇಂಕ್ವಿಲಾಬ್ ಎಂದು ಬೊಬ್ಬೆ ಹೊಡೆಯುತ್ತಾ ತಲಶ್ಶೇರಿ ಜಗನ್ನಾಥ ದೇವಳಕ್ಕೆ ಬಂದವರು ಅಮ್ಮ ಎಂದು ಕೂಗಿಕೊಂಡು ಓಡಿದರು. ಕಠಿಣ ಹೋರಾಟವಾಗಿತ್ತು” ಎಂದು ಪೋಸ್ಟ್ ಮಾಡಿ ಗಾಯಕ್ಕೆ ಉಪ್ಪು ಸವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News