×
Ad

ಭೇಟಿಗೆ ಬಂದ ಜರ್ಮನ್ ಚಾನ್ಸಲರ್ ಮರ್ಕೆಲ್ ರನ್ನು ಅವಮಾನಿಸಿದ ಟ್ರಂಪ್ !

Update: 2017-03-18 12:31 IST

ವಾಷಿಂಗ್ಟನ್ ಮಾ.18: ಶ್ವೇತ ಭವನದಲ್ಲಿ ಶುಕ್ರವಾರ ತಾವು ಹಾಗೂ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರು ಜತೆಯಾಗಿ ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಮರ್ಕೆಲ್ ಅವರ ಕೈಕುಲುಕಲು ನಿರಾಕರಿಸಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಮ್ಮ ಅತಿಥಿಯನ್ನು ಅವಮಾನಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಅವರು ಬಹಿರಂಗವಾಗಿ ಮರ್ಕೆಲ್ ಅವರೊಂದಿಗೆ ಹಲವು ವಿಚಾರಗಳ ಬಗ್ಗೆ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರಿಂದ ಇದೇ ಕಾರಣಕ್ಕೆ ಕೈಕುಲುಕಲು ನಿರಾಕರಿಸಿದ್ದಿರಬಹುದು ಎಂದು ತಿಳಿಯಲಾಗಿದೆ.

ಟ್ವಿಟ್ಟರಿಗರಂತೂ ಈ ವಿಚಾರವನ್ನು ಕೈಗೆತ್ತಿಕೊಂಡು ಟ್ರಂಪ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ ಹಾಗೂ ಈ ವಿಚಾರದಲ್ಲಿ ತಮ್ಮದೇ ಆದ ಊಹಾಪೋಹಗಳ ಆಧಾರದಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಘಟನೆಯ ಫೋಟೊ ನೋಡಿದಾಗ ಒಂದಂತೂ ಸ್ಪಷ್ಟ. ಛಾಯಾಗ್ರಾಹಕರು ಫೋಟೋಗಾಗಿ ಮರ್ಕೆಲ್ ಮತ್ತು ಟ್ರಂಪ್ ಅವರನ್ನು ಕೈಕುಲುಕಲು ಹೇಳಿದಾಗ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡದ ಟ್ರಂಪ್ ವಿನಂತಿಯನ್ನು ತಿರಸ್ಕರಿಸಿದರು. ಮರ್ಕೆಲ್ ಅವರೂ ಟ್ರಂಪ್ ಅವರಿಗೆ ಈ ಬಗ್ಗೆ ಹೇಳಿದಾಗ ಅವರು ಅದನ್ನು ನಿರ್ಲಕ್ಷ್ಯಿಸಿದ್ದಾರೆ.

ಅಲ್ಲಿದ್ದ ಗದ್ದಲದ ವಾತಾವರಣದಲ್ಲಿ ಮರ್ಕೆಲ್ ಮಾತು ಟ್ರಂಪ್ ಅವರಿಗೆ ಕೇಳಿಸಿರಲಿಕ್ಕಿಲ್ಲ ಎಂಬುದು ಒಂದು ವಾದ.
ಟ್ವಿಟ್ಟರಿಗರಂತೂ ಟ್ರಂಪ್ ಅವರು ಮರ್ಕೆಲ್ ಜತೆಯೇಕೆ ಕೈಕುಲುಕಿಲ್ಲ ಎಂಬುದಕ್ಕೆ ತಮ್ಮದೇ ಊಹೆಯ ಆಧಾರದಲ್ಲಿ ಹಲವಾರು ಸ್ವಾರಸ್ಯಕರ ಕಾರಣಗಳನ್ನು ನೀಡಿ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News